By: Oneindia Kannada Video Team
Published : December 16, 2017, 01:16

ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ನಮ್ಮ ಟಾರ್ಗೆಟ್ ಎಂದ ಎಂಎಲ್ಎ ಡಾ ಸಿಎನ್ ಅಶ್ವಥನಾರಾಯಣ

Subscribe to Oneindia Kannada

ಬೆಂಗಳೂರಿನ ಮಲ್ಲೇಶ್ವರಂ ಶಾಸಕರಾದ ಡಾ ಸಿ ಎನ್ ಅಶ್ವಥನಾರಾಯಣ ಅವರು ಬಿಜೆಪಿ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಒನ್ ಇಂಡಿಯಾ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಅಶ್ವಥನಾರಾಯಣ ಅವರು ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಕೇವಲ ಪ್ರಚಾರಕ್ಕಷ್ಟೇ ಸೀಮಿತ. ಆಡಳಿತ ನಡೆಸೋದಕ್ಕೆ ಅಲ್ಲ, ಜನಗಳಿಗೆ ಇದುವರೆಗೂ ಯಾವುದೇ ರೀತಿ ಸಹಾಯವಾಗುವಂತಹ ಕೆಲಸಗಳನ್ನ ಮಾಡಿಲ್ಲ. ಅಧಿಕಾರಕ್ಕೆ ಬಂದ 4.5 ವರ್ಷಗಳಲ್ಲಿ ಯಾವುದೇ ಜನಸ್ನೇಹಿ ಕೆಲಸ ಮಾಡಿಲ್ಲ. ಬಡವರಿಗೆ ಮನೆ ಕಲ್ಪಿಸಿಕೊಟ್ಟಿಲ್ಲ. ರಸ್ತೆಗಳನ್ನ ಸರಿ ಮಾಡಿಸಿಲ್ಲ. ಬೆಂಗಳೂರಿನ ತುಂಬೆಲ್ಲ ಗುಂಡಿಗಳೇ ಕಾಣುತ್ತವೆ, ರಸ್ತೆಗಳನ್ನ ರಿಪೇರಿ ಮಾಡಿಸೋ ಗೋಜಿಗೂ ಹೋಗಿಲ್ಲ. ಚುನಾವಣೇಲಿ ನಮ್ಮ ಗುರಿ ಏನಿದ್ರೂ ಕಾಂಗ್ರೆಸ್ ಹಾಗು ಸಿದ್ದರಾಮಯ್ಯ ಸರ್ಕಾರದ ಮೇಲೆ ಎಂದು ಅಶ್ವಥನಾರಾಯಣ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!