By : Oneindia Kannada Video Team
Published : December 06, 2017, 01:38

ಹಾವೇರಿಯಲ್ಲಿ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಸವಾಲ್

ಹಾವೇರಿಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಮುಖಂಡರು ವಿರೋಧ ಪಕ್ಷಗಳ ಮೇಲೆ ಹರಿಹಾಯ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸುವುದಾಗಿ ಅಬ್ಬರಿಸಿದ ಸಿದ್ದರಾಮಯ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ತಮ್ಮದೇ ಶೈಲಿಯಲ್ಲಿ ಗೇಲಿ ಮಾಡಿ, ಬಿಜೆಪಿ ಮಿಷನ್ 150 ಟುಸ್‌ಸ್‌ ಎನ್ನಲಿದೆ ಎಂದರು.ವ್ಯಂಗ್ಯ, ಮೊನಚು ಮಾತು, ಗೇಲಿ ಕಾಂಗ್ರೆಸ್ ಸಾಧನೆ ಪಟ್ಟಿ ಎಲ್ಲವೂ ಇದ್ದ ಸಿದ್ದರಾಮಯ್ಯ ಭಾಷಣಕ್ಕೆ ಕಾಂಗ್ರೆಸ್ ಕಾರ್ಯತರು ಚಪ್ಪಾಳೆಗಳ ಸುರಿಮಳೆಗೈದರು. ಸಿದ್ದರಾಮಯ್ಯ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಕೂಡ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಅವರನ್ನು ಹೊಗಳಿದ ಎಸ್.ಆರ್.ಪಾಲೀಲ್ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು. ಮಹದಾಯಿ ವಿಚಾರವಾಗಿ ಮಾತನಾಡಿದ ಸಿ.ಎಂ ಅವರು ಯಡಿಯೂರಪ್ಪನವರು ಮಹದಾಯಿ ವಿವಾದವನ್ನ ಕೇಂದ್ರ ಸರಕಾರದ ಸಹಾಯದಿಂದ ಒಂದೇ ತಿಂಗಳಲ್ಲಿ ಬಗೆಹರಿಸುತ್ತೆನೆಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಸಹಜ. ಯಡಿಯೂರಪ್ಪನವರು ಮಾತಿಗೆ ತಕ್ಕಹಾಗೇ ಮಹದಾಯಿ ವಿವಾದವನ್ನ ಬಗೆಹರಿಸಲಿ ಎಂದು ಬಿ ಎಸ್.ವೈ ಗೆ ಸವಾಲೆಸೆದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!