By : Oneindia Kannada Video Team
Published : December 20, 2017, 04:59

ಬಿಜಾಪುರಕ್ಕೆ ಬಂದ ಸಿದ್ದರಾಮಯ್ಯನವರು ಮೋದಿ ವಿರುದ್ಧ ವಾಗ್ದಾಳಿ

'ಬಿಜೆಪಿ ನಾಯಕರ ಬುಟ್ಟಿಯಲ್ಲಿ ಹಾವಿಲ್ಲ. ಕೇವಲ ಪುಂಗಿ ಊದುತ್ತಾರೆ. ಹಾವಿದ್ದರೆ ತಾನೇ ಆಚೆ ಬರುವುದು?. ಬಿಜೆಪಿ 150 ಅಲ್ಲ 50 ಸ್ಥಾನಗಳಲ್ಲಿಯೂ ಜಯಗಳಿಸುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.ನವ ಕರ್ನಾಟಕ ನಿರ್ಮಾಣ ರಾಜ್ಯ ಪ್ರವಾಸದ ಅಂಗವಾಗಿ ಬುಧವಾರ ಸಿದ್ದರಾಮಯ್ಯ ವಿಜಯಪುರದ ಮುದ್ದೇಬಿಹಾಳಕ್ಕೆ ಆಗಮಿಸಿದ್ದಾರೆ. ವಿವಿಧ ಯೋಜನೆಗೆಳಿಗೆ ಚಾಲನೆ ನೀಡಿ, ಬೃಹತ್ ಸಮಾವೇಶ ಆಯೋಜಿಸಿ ಮಾತನಾಡಿದರು.ಸಿದ್ದರಾಮಯ್ಯ ಅವರದ್ದು ಭ್ರಷ್ಟ ಸರ್ಕಾರ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಹೋದ ಕಡೆಯಲ್ಲ ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಭ್ರಷ್ಟರು ಎಂದು ಹೇಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ.ಪರಿವರ್ತನಾ ಯಾತ್ರೆಗೂ ಮೊದಲೇ ಸಿದ್ದರಾಮಯ್ಯ ಸರ್ಕಾರದ ಹಗರಣಗಳ ದಾಖಲೆಗಳನ್ನು ಪ್ರತಿದಿನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಯಡಿಯೂರಪ್ಪ ಯಾತ್ರೆ ಆರಂಭಿಸಿ ಒಂದು ತಿಂಗಳು ಕಳೆಯಿತು. ಒಂದೂ ದಾಖಲೆ ಹೊರಬಂದಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!