By : Oneindia Kannada Video Team
Published : November 10, 2017, 01:14

ಕ್ರೌರ್ಯತೆ ಮೆರೆದ ಗುಜರಾತ್ ಯುವಕರು

ಮನುಷ್ಯ ಉಳಿದೆಲ್ಲ ವ್ಯಾಘ್ರ ಪ್ರಾಣಿಗಳಿಗಿಂತಲೂ ಕ್ರೂರಿ ಎಂಬುದು ಎ.ಎನ್.ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿರುವ ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಕ್ರೂರ ಪ್ರಾಣಿ ಎಂದೇ ಕರೆಯಲ್ಪಡುವ ಸಿಂಹವನ್ನೂ ಬಿಡದ ಕ್ರೂರಿ ಯುವಕರು ಬೇಕೆಂದೇ ಸಿಂಹಗಳನ್ನು ಅಟ್ಟಾಡಿಸಿಕೊಂಡು ಹೋಗಿ ತೊಂದರೆ ನೀಡಿ ವಿಕೃತಿ ಮೆರೆದಿದ್ದಾರೆ. ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಯುವಕರು ಸಿಂಹ ಮತ್ತು ಸಿಂಹಿಣಿಯೊಂದನ್ನು ಉದ್ದೇಶಪೂರ್ವಕವಾಗಿ ತಮ್ಮ ಬೈಕುಗಳಲ್ಲಿ ಅಟ್ಟಾಡಿಸಿಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ವೈರಲ್ ಆಗಿದ್ದು ಕೋಟ್ಯಾಂತರ ಮಂದಿ ಪ್ರಾಣಿ ಪ್ರಿಯರಿಂದ ಟೀಕೆಗೆ ಗುರಿಯಾಗಿದೆ. ಮತ್ತೊಂದು ದೃಶ್ಯದಲ್ಲಿ ಹಾಡು ಹಗಲೇ ನಾಲ್ಕು ಮಂದಿ ಯುವಕರು ಎರಡು ಬೈಕ್ ಗಳಲ್ಲಿ ಸಿಂಹ ಮತ್ತು ಸಿಂಹಿಣಿಯೊಂದನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವಿದೆ. ಯುವಕರ ಬೈಕ್ ಆರ್ಭಟ, ಹಾರ್ನ್ ಶಬ್ದಕ್ಕೆ ಬೆದರಿದ ಹುಲಿಗಳು ಗಾಬರಿಯಾಗಿ ಓಡುವುದು ಕರುಣೆ ಉಕ್ಕಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮೂರು ಮಂದಿ ಯುವಕರನ್ನು ಬಂಧಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!