By: Oneindia Kannada Video Team
Published : June 05, 2017, 06:31

ಶೋಬಿತ್ ಸಮಯ ಪ್ರಜ್ಞೆಯಿಂದ 22 ಜನರ ಪ್ರಾಣ ಉಳಿಯಿತು

Subscribe to Oneindia Kannada

ಅಂದು ಶನಿವಾರ ಮಧ್ಯಾಹ್ನ ೧ ಗಂಟೆಯ ಸಮಯ. ನೋಡ ನೋಡುತ್ತಿದ್ದಂತೆಯೇ ಭೀಕರ ಅಲೆಗಳು ಬಾರ್ಜ್ ಗೆ ಅಪ್ಪಳಿಸತೊಡಗಿದವು . ೧.೩೦ರ ವೇಳೆಗೆ ಬಾರ್ಜ್ ಆಂಕರ್ ತುಂಡಾಗಿ ನಿಯಂತ್ರಣ ತಪ್ಪಿತ್ತು. ಒಂದು ಕ್ಷಣ ಇಡೀ ಬಾರ್ಜ್ ಅಲ್ಲೋಲ - ಕಲ್ಲೋಲವಾಯಿತು. ಎಲ್ಲರು ಬೊಬ್ಬೆ ಹಾಕಿದೆವು. ಬಲವಾದ ಗಾಳಿ, ರಕ್ಕಸ ಅಲೆಗಳ ರಭಸಕ್ಕೆ ನಮ್ಮ ಬಾರ್ಜ್ ತಡೆಗೋಡೆಗಳ ಮೇಲೇರಿ ನಿಂತಿತ್ತು. ಅದೃಷ್ಟವಶಾತ್ ಯಾರಿಗೇನೋ ಆಗಿಲ್ಲ. - ಈ ಮಾತುಗಳನ್ನು ಹೇಳಿದ್ದು ಶನಿವಾರ ರಾತ್ರಿ ಉಳ್ಳಾಲ ಸಮೀಪದ ಸಮುದ್ರದಲ್ಲಿ ಬಂಡೆಗಲ್ಲಿಗೆ ಅಪ್ಪಳಿಸಿ ಮುಳುಗುವ ಭೀತಿ ಹುಟ್ಟಿಸಿದ್ದ ಬಾರ್ಜ್ ನಲ್ಲಿದ್ದ 22 ಪ್ರಯಾಣಿಕರಲ್ಲೊಬ್ಬರಾಗಿದ್ದ ಶೋಭಿತ್.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!