By : Oneindia Kannada Video Team
Published : January 26, 2018, 01:40

ಬದುಕನ್ನು ಮುನ್ನಡೆಸುತ್ತಿರುವ ನಡೆದಾಡುವ ದೇವರ ಆಶ್ರಯದಲ್ಲಿ ಕಲಿತ ಪಾಠ

ಕಾರಣವೇನೇ ಇರಲಿ ನನ್ನನ್ನು ಸಿದ್ಧಗಂಗಾ ಮಠದಲ್ಲಿ ಬಿಟ್ಟ ದಿನದಿಂದ ಅಲ್ಲಿದ್ದ ಸಾವಿರಾರು ಮಕ್ಕಳಿಗೆ ಪೋಷಕರಾಗಿದ್ದ ಪೂಜ್ಯ ಸ್ವಾಮಿಜಿ ನನ್ನ ಪೋಷಕರೂ ಆದರು. ಎಂಟನೇ ತರಗತಿಯಿಂದ ಪ್ರಾರಂಭವಾಗುವ ದಾಖಲೆಗಳಲ್ಲಿ ಒಂದಾದ ಕ್ಯುಮಲೇಟಿವ್ ರೆಕಾರ್ಡ್ ನಲ್ಲಿ ಪೋಷಕರ ಹೆಸರು ಎಂಬಲ್ಲಿ ನಮೂದಾಗಿರುವ ಶ್ರೀ ಶಿವಕುಮಾರ ಸ್ವಾಮಿಗಳು ಎಂಬುದರಲ್ಲಿನ ಒಂದೊಂದು ಅಕ್ಷರವನ್ನೂ ಓದುವಾಗ ನಾನು ಎಂಥ ಮಹಾನುಭಾವರನ್ನು ಪೋಷಕರನ್ನಾಗಿ ಪದೆದಿದ್ದೆ ಎಂದು ರೋಮಾಂಚನವಾಗುತ್ತದೆ.

ಅವರನ್ನು ನೆನೆದಾಗಲೆಲ್ಲ ಧನ್ಯತೆಯ ಭಾವ ಮೂಡುತ್ತದೆ. ಮಠಕ್ಕೆ ಸೇರುವ ಮೊದಲು, ಆಮೇಲೆಯೂ ನಾನು ಪ್ರತಿಭಾವಂತನೇನಲ್ಲ. ಸಾಮಾನ್ಯ ವಿದ್ಯಾರ್ಥಿಗಳಲ್ಲಿಯೇ ಸಾಮಾನ್ಯ. ಆದರೆ ಬುದ್ಧಿಯವರ ಪ್ರಭಾವ ಅಸಾಮಾನ್ಯವಾದುದು. ಅವರು ಅಲ್ಲಿ ನಮ್ಮನ್ನು ಪೋಷಿಸುವ ದಾತರಷ್ಟೇ ಆಗಿದ್ದರೆಂದು ನನಗನ್ನಿಸಿದ್ದಿಲ್ಲ. ತಂದೆ, ಗುರು, ತಾತ, ಅನ್ನದಾತ ಎಲ್ಲವೂ ಆಗಿದ್ದರು.

ಸಂಜೆಯ ಪ್ರಾರ್ಥನೆ ಮುಗಿದ ಮೇಲೆ ಹೇಳುತ್ತಿದ್ದ ಕಥೆಗಳು, ವಚನಗಳು, ನೀತಿ ಎಲ್ಲವೂ ನನ್ನಲ್ಲಿ ಲೇಖಕ ಹಾಗೂ ಮನುಷ್ಯನೊಬ್ಬನನ್ನು ರೂಪಿಸುತ್ತಿದ್ದವು ಎಂದು ನನಗಂದು ಅನ್ನಿಸಿರಲಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!