By: Oneindia Kannada Video Team
Published : December 14, 2017, 12:44

ಟ್ವಿಟ್ಟರ್ ನಲ್ಲಿ ಪಕ್ಷದ ನಾಯಕರಿಗೆ ಸಿನ್ಹಾ ಪ್ರಶ್ನೆ!

Subscribe to Oneindia Kannada

ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ತಮ್ಮ ಪಕ್ಷದ ನಾಯಕರ ವಿರುದ್ಧವೇ ಮತ್ತೆ ಸರಣಿ ಟ್ವಿಟ್‌ ಗಳನ್ನು ಮಾಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಗುಜರಾತ್ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸರಣಿ ಪ್ರಶ್ನೆಗಳನ್ನು ಶತ್ರುಘ್ನ ಸಿನ್ಹಾ ಕೇಳಿದ್ದಾರೆ.'ಗುಜರಾತ್‌ನಲ್ಲಿ ಕುಳಿತು ಕ್ರೆಡಿಟ್ ಪಡೆಯಲು ಪ್ರತ್ನ ನಡೆಸುತ್ತಿರುವ ಸರ್ಕಾರವನ್ನು, ಸಚಿವರನ್ನು ಮನೆಗೆ (ದೆಹಲಿಗೆ) ಕರೆ ತರಲು ಸಮಯ ಬಂದಿದೆ' ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ. ಡಿ.14ರ ಗುರುವಾರ ಗುಜರಾತ್‌ನಲ್ಲಿ 2ನೇ ಹಂತದ ಚುನಾವಣೆಯ ಮತದಾನ ನಡೆಯಲಿದೆ. 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.22 ಕೋಟಿ ಮತದಾರರು ಮತ ಚಲಾವಣೆ ಮಾಡುವ ಹಕ್ಕು ಹೊಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!