By : Oneindia Kannada Video Team
Published : December 13, 2017, 11:55

ವಿರಾಟ್ ಹಾಗು ಅನುಷ್ಕಾರಿಗೆ ವಿಭಿನ್ನವಾಗಿ ಶುಭಕೋರಿದ ರೋಹಿತ್ ಶರ್ಮ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರು ಮೂಲದ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಮದುವೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಕೆಟರ್ಸ್, ಸಿನಿಮಾ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೀತಿಯ ಶುಭಹಾರೈಕೆ ಸಲ್ಲಿಸಿದ್ದಾರೆ. 2013ರಿಂದ ಗೆಳೆತನದಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರು ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇಟಲಿಯ ಟಸ್ಕಾನ್ ನಗರದ ಬೋರ್ಗೋ ಫಿನೊಚೆಯಟಾ ರೆಸಾರ್ಟಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನೆರವೇರಿದೆ. ಇನ್ನ ಈ ಜೋಡಿಗೆ ಶುಭಕೋರುತ್ತಿರುವವರು ಕೋಟಿ ಕೋಟಿ ಜನ . ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮ ಅವರು ಸಹ ಈ ವೇಳೆಯಲ್ಲಿ ವಿರಾಟ್ ಕೊಹ್ಲಿ ದಂಪತಿಗೆ ಶುಭ ಹಾರೈಸಿದ್ದಾರೆ . ಹಾಗೆಯೇ ಕೆಲವು ಟಿಪ್ಸ್ ಗಳನ್ನೂ ಸಹ ಕೊಟ್ಟಿದ್ದಾರೆ . ಏನೆಲ್ಲಾ ಟಿಪ್ಸ್ ಕೊಟ್ಟಿದ್ದಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!