By: Oneindia Kannada Video Team
Published : January 11, 2018, 11:38

ಸರ್ಪ ಶಕುನ : ಅಮಿತ್ ಶಾ ತಂಗಿದ್ದ ಬೆಂಗಳೂರಿನ ಹೋಟೆಲ್ ನಲ್ಲಿ ಹಾವು ಕಾಣಿಸಿದ್ದೇ ದೊಡ್ಡ ಕಥೆ

Subscribe to Oneindia Kannada

ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಿದ್ದ ಬೆಂಗಳೂರಿನ ಹೋಟೆಲ್ ನಲ್ಲಿ ಹಾವು ಕಾಣಿಸಿಕೊಂಡ ಸುದ್ದಿಗೆ ವಿಪರೀತ ಪ್ರಾಶಸ್ತ್ಯ ಸಿಕ್ಕಿಹೋಗಿದೆ. ಮಾಧ್ಯಮದಲ್ಲೆಲ್ಲ ಅದೇ ಸುದ್ದಿ. ಅಸಲಿಗೆ ಹಾವು ಕಾಣಿಸಿಕೊಂಡಿದ್ದು ಯಾರಿಗೆ? ಅಮಿತ್ ಶಾ ಅವರಿಗಾ ಅಥವಾ ಬೇರೆ ಯಾರಿಗೆ? ಅಮಿತ್ ಶಾ ಅವರಿಗೆ ಕಂಡಿದ್ದೇ ಆದರೆ ಅದು ಯಾವ ದಿಕ್ಕಿನಿಂದ ಯಾವ ಕಡೆಗೆ ಸಾಗಿತು? ಹೆಡೆ ಎತ್ತಿ ನಿಂತು ಕಾಣಿಸಿಕೊಂಡಿತಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಅಸಲಿಗೆ ಈ ವಿಚಾರವನ್ನು ನಾನಾ ಬಗೆಯಲ್ಲಿ ಯೋಚಿಸಬಹುದು. ಹಾವು ಕಾಣಿಸಿಕೊಂಡ ವ್ಯಕ್ತಿಗೆ ಆತನ ಜೀವನದಲ್ಲಿ ಆಗಬಹುದಾದ ಯಾವುದಾದರೂ ಘಟನೆಯ ಮುನ್ಸೂಚನೆ ಅದಾಗಿರಬಹುದು. ಅಥವಾ ಹೋಟೆಲ್ ಮಾಲೀಕರಿಗೆ ಸಂಬಂಧಪಟ್ಟ ಘಟನೆಯೊಂದರ ಮುನ್ಸೂಚನೆ ಆಗಿರಬಹುದು. ಏಕೆಂದರೆ ಅಮಿತ್ ಶಾ ಕಣ್ಣಿಗೆ ಅಥವಾ ಅವರ ಎದುರಿಗೆ ಹಾವು ಕಾಣಿಸಿಕೊಂಡೇ ಇಲ್ಲ. ಪ್ರಾಣಿಗಳನ್ನು ಆಧರಿಸಿ ಶಕುನ ಹೇಳುವ ಪದ್ಧತಿ ಜ್ಯೋತಿಷ್ಯದಲ್ಲಿದೆ. ಆ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ಕೆಲ ವಿಚಾರಗಳನ್ನು ಸಹ ತಿಳಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!