By : Oneindia Kannada Video Team
Published : November 23, 2017, 11:52

ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಕರ ಜ್ಯೋತಿಯ ರಹಸ್ಯ ಬಯಲು Filmibeat Kannada

ಶಬರಿಮಲೈನ "ಮಕರ ಜ್ಯೋತಿ" ಯ ರಹಸ್ಯ ಬಯಲು..
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವು ಅತ್ಯಂತ ಪವಿತ್ರವಾದುದು. ಇದೊಂದು ದಕ್ಷಿಣ ಭಾರತದ ಪವಿತ್ರವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕೇರಳ ರಾಜ್ಯದ ಪರುನಾಥ್ ಗ್ರಾಮ ಪಂಚಾಯತ್‍ನ ಪಥನಂತಿಟ್ಟ ಜಿಲ್ಲೆಯ ಪಶ್ಚಿಮ ಘಾಟ್ ಪರ್ವತ ಶ್ರೇಣಿಗಳ ಪೆರಿಯಾರ್ ಟೈಗರ್ ರಿಸರ್ವ್‍ನಲ್ಲಿರುವ ಯಾತ್ರಾ ಕೆಂದ್ರವಾಗಿದೆ. ಈ ದೇವಾಲಯವು ಕೂಡ ಅಪಾರ ಭಕ್ತರನ್ನು ಹೊಂದಿರುವ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 45 ರಿಂದ 50 ಮಿಲಿಯನ್ ಭಕ್ತರು ಭೇಟಿ ನೀಡುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಈ ದೇವಾಲಯದಲ್ಲಿ ಒಂದು ವಿಸ್ಮಯ ನಡೆಯುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಅದೇನೆಂದರೆ "ಮಕರ ಜ್ಯೋತಿ". ಈ ವಿಸ್ಮಯವನ್ನು ಕಾಣಲು ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಮಾಡಿ ಪುನೀತರಾಗುತ್ತಾರೆ. ಈ ಮಕರ ಜ್ಯೋತಿಯ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳಿವೆ. ಒಬ್ಬರು ಇದು ವಿಸ್ಮಯ ಎಂದರೆ ಮತ್ತೆ ಕೆಲವರು ಇದೆಲ್ಲಾ ಮೋಸ ಎಂದೂ ವಾದಿಸುತ್ತಾರೆ. ಇದಕ್ಕೆ ಉತ್ತರವನ್ನು ದೇವಾಲಯದ ಕಮಿಟಿಯವರು ನೀಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!