By : Oneindia Video Kannada Team
Published : July 13, 2019, 02:23
Duration : 02:20
02:20
ಸಾ ರಾ ಮಹೇಶ್ ಹಾಗು ಬಿಜೆಪಿ ಮುಖಂಡರ ಭೇಟಿ ನಂತರ ನಡೆದಿದ್ದೇನು?
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಬಿಜೆಪಿ ಮುಖಂಡರಾದ ಮುರಳೀಧರ್ ರಾವ್, ಈಶ್ವರಪ್ಪ ಭೇಟಿಯ ವಿಚಾರ, ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿರುವುದು ಒಂದು ಕಡೆಯಾದರೆ, ಬಿಜೆಪಿ ವರಿಷ್ಠರ ವಲಯದಲ್ಲೂ ತೀವ್ರ ಚರ್ಚೆಗೆ ಗುರಿಯಾಗಿದೆ. ಸಚಿವ ಮಹೇಶ್, ತಮ್ಮ ಸುಪರ್ದಿಯಲ್ಲಿ ಬರುವ KSTDC ವ್ಯಾಪ್ತಿಯ ಕೆ ಕೆ ಗೆಸ್ಟ್ ಹೌಸಿನಲ್ಲಿ ಇಬ್ಬರು ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದರು. ಈ ಭೇಟಿ, ನಾಡಿನೆಲ್ಲಡೆ ಭಾರೀ ಸುದ್ದಿಯಾಗುತ್ತಿದ್ದಂತೆಯೇ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.