By: Oneindia Kannada Video Team
Published : November 23, 2017, 03:49

ಬೆಂಗಳೂರಿನ ರಾಯಲ್ ಕಾಂಕಾರ್ಡ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅನಾಹುತ

Subscribe to Oneindia Kannada

ಬೆಂಗಳೂರು: ರಾಯಲ್ ಕಾಂಕಾರ್ಡ್ ಶಾಲೆಯಲ್ಲಿ ಅವಾಂತರ, 3 ದಿನ ರಜೆ. ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಮಾಜಿ ಶಾಸಕ ಎಲ್. ಆರ್ ಶಿವರಾಮೇಗೌಡ ಅವರಿಗೆ ಸೇರಿದ ರಾಯಲ್ ಕಾಂಕಾರ್ಡ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ದೊಡ್ಡ ಅವಾಂತರವೇ ನಡೆದಿದೆ. ಶಾಲೆಯ ಕಿಟಕಿ ಗಾಜುಗಳು ಬಿದ್ದು ಮೂರು ಮಕ್ಕಳಿಗೆ ತೀವ್ರ ತರನಾದ ಗಾಯಗಳಾಗಿವೆ. ಗಾಯಗೊಂಡಿರುವ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಆಕ್ರೊಶಗೊಂಡಿರುವ ಮಕ್ಕಳ ಪೋಷಕರು ಗುರುವಾರ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆ ಆಡಳಿತ ಮಂಡಳಿಯ ನಿರ್ಲಕ್ಷ್ಯತನಕ್ಕೆ ಪೋಷಕರು ತೀವ್ರ ತರಹನಾದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗಾಯಗೊಂಡಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಶಾಲೆಯ ಮುಖ್ಯಸ್ಥ ಮಾಜಿ ಶಾಸಕ ಎಲ್. ಆರ್ ಶಿವರಾಮೇಗೌಡ ಒಪ್ಪಿಕೊಂಡಿದ್ದಾರೆ. ಆದರೂ ಪಟ್ಟು ಬಿಡದ ಪೋಷಕರು ಪ್ರತಿಭಟನೆ ಮುಂದುವರೆಸಿದ್ದಾರೆ. ಇದರಿಂದ ರಾಯಲ್ ಕಾಂಕಾರ್ಡ್ ಶಾಲೆಯ ಆಡಳಿತ ಮಂಡಳಿ ಮೂರು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!