By: Oneindia Kannada Video Team
Published : November 29, 2017, 10:34

ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು !

Subscribe to Oneindia Kannada

ಬೆಂಗಳೂರಿನಲ್ಲಿ ಅರ್ಧ ಶತಕದ ಗಡಿ ದಾಟಿರುವ ಈರುಳ್ಳಿ ಬೆಲೆ ಇನ್ನೊಂದು ವಾರ ಕಡಿಮೆಯಾಗುವುದಿಲ್ಲ. ಹಾಪ್‌ ಕಾಮ್ಸ್‌ನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಬೆಲೆ 65 ರೂ.ಗೆ ಏರಿಕೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಅಧಿಕ ಮಳೆಯಾಗಿರುವುದರಿಂದ ತರಕಾರಿ ಬೆಳೆಗಳು ಕೊಳೆತು ಹೋಗಿವೆ. ಆದ್ದರಿಂದ, ಬೆಲೆಗಳು ಹೆಚ್ಚಳ ವಾಗುತ್ತಿವೆ. ಈರುಳ್ಳಿ, ಕ್ಯಾರೇಟ್, ಬಿಟ್ ರೋಟ್, ನುಗ್ಗೇಕಾಯಿ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. 'ಈ ಬಾರಿ ನಮ್ಮ ರಾಜ್ಯದಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ 15 ದಿನಗಳಲ್ಲಿ ಈರುಳ್ಳಿ ಸರಬರಾಜು ಆಗಲಿದ್ದು, ನಂತರ ಬೆಲೆಗಳು ಕಡಿಮೆಯಾಗಲಿವೆ' ಎಂದು ಹಾಪ್‌ ಕಾಮ್ಸ್‌ ಅಧಿಕಾರಿಗಳು ಹೇಳಿದ್ದಾರೆ. 'ಅಧಿಕ ಮಳೆಯಿಂದಾಗಿ ತರಕಾರಿಗಳು ಕೊಳೆತು ಹೋಗಿವೆ. ಕ್ಯಾರೇಟ್ ಬೆಲೆ ಏರುತ್ತಲೇ ಇದೆ. ದೆಹಲಿ ಮತ್ತು ಊಟಿಯಿಂದ ಸದ್ಯ ರಾಜ್ಯಕ್ಕೆ ಕ್ಯಾರೇಟ್ ಬರುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!