By: Oneindia Kannada Video Team
Published : January 26, 2018, 10:56

ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ 10 ಆಸಿಯಾನ್ ನಾಯಕರು

Subscribe to Oneindia Kannada

ಈ ಬಾರಿಯ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಸಿಯನ್ ( ASEAN) ದೇಶಗಳ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ.

ಥಾಯ್ಲಾಂಡ್, ವಿಯೆಟ್ನಾಂ, ಇಂಡೋನೇಷ್ಯ, ಮಲೇಷ್ಯ, ಫಿಲಿಪ್ಪೀನ್ಸ್, ಸಿಂಗಾಪುರ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನೆ ದೇಶಗಳ ಮುಖ್ಯಸ್ಥರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.ಆಸಿಯಾನ್ ರಚನೆಗೊಂಡು 50 ವಸಂತಗಳು ಕಳೆದಿದ್ದು ಭಾರತ ಇದರ ಸದಸ್ಯತ್ವ ಪಡೆದ 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ರಾಜಪಥ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ವಿದೇಶಿ ಅತಿಥಿಗಳು ಸಾಕ್ಷಿಯಾಗಲಿದ್ದಾರೆ. ಜತೆಗೆ ಈ ದೇಶಗಳಿಗೆ ಸೇರಿದ 700 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಪ್ರದರ್ಶನಗಳು ಗಣರಾಜ್ಯೋತ್ಸವದಲ್ಲಿ ಇರಲಿದೆ. ಇದೆ ಮೊದಲ ಬಾರಿಗೆ ಗಡಿ ಭದ್ರತಾ ಪಡೆಯ ಮಹಿಳಾ ಬೈಕರ್ ಗಳು ತಮ್ಮ ಚೊಚ್ಚಲ ಪ್ರದರ್ಶನವನ್ನು ಇಂದು ನೀಡಲಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!