By : Oneindia Kannada Video Team
Published : December 07, 2017, 01:28

ರಾಣಿ ಪದ್ಮಾವತಿ (ಪದ್ಮಿನಿ)ಯ ಅಸಲಿ ಕಥೆ

ರಾಣಿ ಪದ್ಮಿನಿ ( ಪದ್ಮಾವತಿ ) ಅತ್ಯಂತ ಸುಂದರ ರೂಪವತಿ ರಾಣಿ. ರಾಣಿ ಪದ್ಮಿನಿ
ರಜಪೂತ ರಾಣಿಯಾಗಿದ್ದು ತಂದೆ ಗಂಧರ್ವ ಸೇನಾ ಹಾಗು ತಾಯಿ ಚಂಪಾವತಿ. ರಾಣಿ ಪದ್ಮಾವತಿ
ತನ್ನ ಬಾಲ್ಯದಲ್ಲಿ ಹೀರಾ ಮಣಿ ಎಂಬ ಗಿಳಿಯ ಜೊತೆ ಅತಿ ಹೆಚ್ಚು ಸಮಯವನ್ನ
ಕಳೆಯುತ್ತಿದ್ದಳು. ರಾಣಿ ಪದ್ಮಾವತಿ ಮದುವೆಯ ವಯಸ್ಸಿಗೆ ಬಂದಾಗ ತಂದೆ ಗಂಧರ್ವ ಸೇನಾ
ಮಗಳಿಗೆ ಮಾಡುವೆ ಮಾಡಲೆಂದು ಆಲೋಚಿಸಿ ಸ್ವಯಂವರವನ್ನ ಏರ್ಪಡಿಸುತ್ತಾರೆ. ಆ ಸ್ವಯಂವರಕ್ಕೆ
ಎಲ್ಲಾ ಹಿಂದೂ ರಾಜರು ಹಾಗು ರಜಪೂತ ರಾಜರಿಗೆ ಆಹ್ವಾನವನ್ನ ಕೊಡಲಾಗಿತ್ತು. ಇದೇ
ಸ್ವಯಂವರಕ್ಕೆ ಒಂದು ಸಣ್ಣ ಪ್ರದೇಶದ ರಾಜನಾದ ಮಲ್ಕಾನ್ ಸಿಂಗ್ ಹಾಗು ಮೇವಾರ್ ರಾಜ್ಯದ
ರಾಜ ರಾವಲ್ ರತನ್ ಸಿಂಗ್ ಕೂಡ ಬಂದಿರುತ್ತಾನೆ. ಈ ಸ್ವಯಂವರದಲ್ಲಿ ರಾಜ ರತನ್ ಸಿಂಗ್ ರಾಜ
ಮಲ್ಕಾನ್ ಸಿಂಗ್ ನನ್ನ ಸೋಲಿಸಿ ರಾಣಿ ಪದ್ಮಾವತಿಯ ಕೈ ಹಿಡೀತಾನೆ. ಮುಂದೇನಾಯ್ತು ಎಂದು ತಿಳಿಯಲು ಈ ವಿಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!