By : Oneindia Kannada Video Team
Published : October 27, 2017, 02:52

ರವಿ ಡಿ ಚಣ್ಣನವರ್ ರವರಿಂದ ಸರ್ಕಾರೀ ನೌಕರಿ ಪಡೆಯುವ ಹೊಸ ಉಪಾಯ

ನಿಮಗೆ ಐಎಎಸ್, ಕೆಎಎಸ್ ಅಥವಾ ಸರ್ಕಾರಿ ಅಧಿಕಾರಿ ಆಗಬೇಕು ಎಂಬ ಆಸೆಯಿದೆಯೇ? ಹಾಗಾದರೆ ಶೀಘ್ರವೇ ನಿಮ್ಮ ಕನಸು ಕೈಗೂಡುವ ಅವಕಾಶವೊಂದು ನಿಮಗೆ ಒದಗಿ ಬರಲಿದೆ! ಹೌದು, ಬಡ ಪ್ರತಿಭಾವಂತ ಮಕ್ಕಳ ಉದ್ಯೋಗದ ಕನಸನ್ನು ನನಸು ಮಾಡಲಿಕ್ಕಾಗಿಯೇ ಮೈಸೂರಿನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ತರಬೇತಿಯು ಉಚಿತವಾಗಿ ಪ್ರಾರಂಭವಾಗುತ್ತಿದ್ದು, ಹಲವು ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನ ವಾಗಿದೆ. ಜಿಲ್ಲಾಡಳಿತ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಹಾಗೂ ನವೋದಯ ಫೌಂಡೇಶನ್ ವತಿಯಿಂದ ರಾಷ್ಟ್ರಮಟ್ಟದಲ್ಲಿ ಗುಣಾತ್ಮಕ ತರಬೇತಿ ನೀಡುವ ಉದ್ದೇಶದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತರಬೇತಿಯ ಸಂಚಾಲಕರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.ಹೈದರಾಬಾದ್ ನಂತಹ ಮಹಾನಗರಗಳಿಗೆ ತೆರಳಿ ಗುಣಮಟ್ಟದ ತರಬೇತಿ ಪಡೆಯಲಾಗದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿಯೇ ಉಚಿತ ಸುಸಜ್ಜಿತ ವಸತಿ, ಗ್ರಂಥಾಲಯ ಸೌಲಭ್ಯದೊಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!