By: Oneindia Kannada Video Team
Published : December 09, 2017, 05:57

ನನ್ನ ತಂದೆ ನಿರಪರಾಧಿ ಎಂದ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ

Subscribe to Oneindia Kannada

ರವಿ ಬೆಳಗೆರೆ ಮಗಳು ಭಾವನಾ ಅವರು 'ನನ್ನ ತಂದೆ ತಪ್ಪು ಮಾಡಿಲ್ಲ, ಅವರು ನಿರಪರಾಧಿಯಾಗಿ ಹೊರಬರಲಿದ್ದಾರೆ' ಎಂದು ತಂದೆ ಪರ ಮಾತನಾಡಿದ್ದಾರೆ. ರವಿ ಬೆಳಗೆರೆ ಅವರ ಮಗಳಾದ ಭಾವನಾ ಅವರು ಸಿನಿಮಾ ನಟ ಶ್ರೀನಗರ ಕಿಟ್ಟಿ ಅವರ ಪತ್ನಿ. ಭಾವನಾ ಅವರು ಕೆಲವು ಕಿರುತೆರೆ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ಹಾಗೂ ಇವರು ಬಿಗ್ ಬಾಸ್‌ನಲ್ಲಿಯೂ ಭಾಗವಹಿಸಿದ್ದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಅಪ್ಪ ಒಬ್ಬರನ್ನು ಕೊಲ್ಲುವ ನಿರ್ಧಾರಕ್ಕೆ ಹೋಗಿರಲು ಸಾಧ್ಯವಿಲ್ಲ, ಅವರು ಖಂಡಿತ ನಿರಪರಾಧಿ, ನಾನು ಅವರ ಮಗಳು ಅವರ ಪರವಾಗಿಯೇ ನಿಲ್ಲುತ್ತೇನೆ ಎಂದಿದ್ದಾರೆ.'ವಕೀಲರ ನಿರ್ದೇಶನ ಇರುವುದರಿಂದ ಪ್ರಕರಣದ ಬಗ್ಗೆ ಹೆಚ್ಚಿಗೇನು ಹೇಳುವುದಿಲ್ಲ ಎಂದ ಅವರು, ಪ್ರಕರಣ ಕುರಿತಂತೆ ಸಿಸಿಬಿಗೆ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದರು.ರವಿ ಬೆಳಗೆರೆ ಅವರ ಎರಡನೇ ಪತ್ನಿ ಅವರ ಬಗ್ಗೆ ಏನನ್ನು ಹೇಳಲು ನಿರಾಕರಿಸಿದ ಭಾವನಾ ಅವರು 'ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ, ಅವರ ಬಗ್ಗೆ ನನಗೆ ಗೊತ್ತೂ ಇಲ್ಲ, ಆ ಕುರಿತು ಏನನ್ನೇ ಕೇಳುವುದಿದ್ದರೂ ಅವರನ್ನೇ ಕೇಳಿ' ಎಂದು ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!