By : Oneindia Kannada Video Team
Published : November 16, 2017, 10:55

ಮಂಡ್ಯದಲ್ಲಿ ಅಂಬರೀಶ್ ಗೆ ಶಾಕ್ ನೀಡಿದ ರಮ್ಯಾ ನಡೆ!

ಇದುವರೆಗೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಮೌನವಾಗಿದ್ದ ಅಂಬರೀಶ್ ಅವರಿಗೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಭಯ ಆರಂಭವಾಗಿದೆಯಾ? ಈ ಬಾರಿ ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ಸಿಗುತ್ತದೆಯಾ? ಮಂಡ್ಯ ರಾಜಕೀಯವೀಗ ಕೌತುಕದ ತಾಣವಾಗಿದೆ! ತಮ್ಮನ್ನು ಬಿಟ್ಟರೆ ಕಾಂಗ್ರೆಸ್ ನಲ್ಲಿ ಗೆಲ್ಲೋರು ಬೇರೆ ಯಾರೂ ಇಲ್ಲ ಎಂಬ ಆತ್ಮವಿಶ್ವಾಸ ಅಂಬರೀಶ್ ಅವರದ್ದಾಗಿತ್ತು. ಆದರೆ ಯಾವಾಗ ರಮ್ಯಾ ಮಂಡ್ಯಕ್ಕೆ ಬರುತ್ತಿದ್ದಾರೆ, ಇಲ್ಲಿ ಮನೆಯನ್ನೂ ಕೂಡ ಖರೀದಿಸಿದ್ದಾರೆ ಎಂಬಿತ್ಯಾದಿ ಮಾತುಗಳು ಸಾರ್ವಜನಿಕ ವಲಯದಲ್ಲಿ ತೇಲಿ ಬರತೊಡಗಿದವೋ ಅಂಬರೀಶ್ ಅವರಿಗೆ ಆಗ ಆತಂಕ ಶುರುವಾಗಿದೆ!ಒಂದು ಹಂತದಲ್ಲಿ ಅಂಬರೀಶ್ ಸೋಲುವ ಕುದುರೆ ಎಂಬಂತೆ ಮಂಡ್ಯದಲ್ಲಿ ಬಿಂಬಿತರಾಗುತ್ತಿದ್ದಾರೆ. ಇದರ ಲಾಭ ರಮ್ಯಾ ಅವರಿಗೆ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ಅಂಬರೀಶ್ ಅವರ ನಡೆ ಏನು ಎಂಬುದು ಮಾತ್ರ ಸದ್ಯ ನಿಗೂಢವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!