By: Oneindia Kannada Video Team
Published : December 05, 2017, 04:09

ಮಂಡ್ಯದಲ್ಲಿ ಶುರು ಆಯ್ತು ಕು.ರಮ್ಯಾ ಕ್ಯಾಂಟೀನ್‌

Subscribe to Oneindia Kannada

ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲೆಡೆ ಕ್ಯಾಂಟೀನ್ ಹವಾ ಶುರು ಆಗಿದೆ . ಇಂದಿರಾ, ಅಪ್ಪಾಜಿ, ಸ್ವಾಮಿ ಕ್ಯಾಂಟೀನ್ ಆಯ್ತು. ಈಗ ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿದೆ. 10 ರೂ. ಊಟ, ಉಪಹಾರವನ್ನು ಕ್ಯಾಂಟೀನ್‌ನಲ್ಲಿ ಸವಿಯಬಹುದಾಗಿದೆ. ಭಾನುವಾರ ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್‌ಗೆ ಚಾಲನೆ ಸಿಕ್ಕಿದೆ. ನಟಿ, ಮಾಜಿ ಸಂಸದೆ ರಮ್ಯಾ ಅವರ ಮೇಲಿನ ಅಭಿಮಾನಕ್ಕಾಗಿ ರಘು ಎನ್ನುವವರು ರಮ್ಯಾ ಕ್ಯಾಂಟೀನ್ ಆರಂಭಿಸಿದ್ದಾರೆ. 15 ವರ್ಷಗಳಿಂದ ರಘು ಅವರು ರಸ್ತೆಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. 'ರಮ್ಯಾ ಅವರು ಸಂಸದೆಯಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಆದ್ದರಿಂದ, ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿದ್ದೇನೆ' ಎಂದು ರಘು ಹೇಳಿದ್ದಾರೆ.ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿದೆ. ಕೇವಲ 10ರೂ.ಗೆ ಊಟ, ಉಪಹಾರ ದೊರೆಯುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!