By : Oneindia Kannada Video Team
Published : December 18, 2017, 12:34

ರಾಹುಲ್ ಗಾಂಧಿ ಬೆನ್ನೆಲುಬು ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ

ರಾಹುಲ್ ಗಾಂಧಿಯವರು ಜನರೊಂದಿಗೆ ಸ್ಪಂದಿಸುವ ರೀತಿಯಲ್ಲಿ ಬದಲಾವಣೆ ಕಂಡಿದ್ದರೆ, ಸಾರ್ವಜನಿಕವಾಗಿ ಅವರ ವರ್ಚಸ್ಸು ವೃದ್ಧಿಯಾಗಿದ್ದೇ ಆದಲ್ಲಿ, ರಾಹುಲ್ ಅವರು ಚುನಾವಣೆ ಗೆಲ್ಲುವ ದಾರಿಯನ್ನು ಕಂಡುಕೊಂಡಿದ್ದೇ ಆದಲ್ಲಿ, ಆ ಶ್ರೇಯಸ್ಸಿನ ಅರೆಪಾವು ಕನ್ನಡ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೂ ಸಲ್ಲಬೇಕು.ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಕಾಂಗ್ರೆಸ್ಸಿನ ಸೋಷಿಯಲ್ ಮತ್ತು ಡಿಜಿಟಲ್ ಮೀಡಿಯಾ ತಂಡದ ನೇತೃತ್ವ ವಹಿಸಿದ ಮೇಲೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅದೃಷ್ಟದ ರೇಖೆಯೂ ಬದಲಾಗಿದೆ ಎಂಬುದನ್ನು ಅವರ ವಿರೋಧಿಗಳೂ ಅಲ್ಲಗಳೆಯಲು ಸಾಧ್ಯವಿಲ್ಲ.ಉತ್ತರ ಪ್ರದೇಶ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರು ರಮ್ಯಾ ಅವರನ್ನು ಸೋಷಿಯಲ್ ಮೀಡಿಯಾ ಹೆಡ್ ಆಗಿ ಮೇ ತಿಂಗಳಲ್ಲಿ ಮಾಡಿದಾಗ, ಹಲವರು ನಕ್ಕಿದ್ದರು, ಕೆಲವರು ಅಪಹಾಸ್ಯ ಮಾಡಿದ್ದರು, ಮತ್ತೊಂದಿಷ್ಟು ಜನ ಭಲೇ ಅಂದಿದ್ದರು. ರಮ್ಯಾ ಅವರಿಗೆ ಎಸೆದ ಸವಾಲು ಸಾಮಾನ್ಯದ್ದಾಗಿರಲಿಲ್ಲ. ಅದಕ್ಕೆ ಸಾಕಷ್ಟು ಪೂರ್ವತಯಾರಿ ಬೇಕಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!