ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರದಿಂದ ಹೂವಿನ ಹಾರ ಎಸೆದಿದ್ದರು. ಅದು ಕರೆಕ್ಟಾಗಿ ರಾಹುಲ್ ಕೊರಳಿಗೆ ಬಿದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ವ್ಯಕ್ತಿ ಎಸೆದ ಹೂಹಾರ ರಾಹುಲ್ ಕೊರಳಿಗೆ ಬೀಳುವ ದೃಶ್ಯದ ವಿಡಿಯೋವನ್ನು ಶೇರ್ ಮಾಡಿ, ಕರ್ನಾಟಕದ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಿ ಪಡಿಸಿ, ಟ್ವೀಟ್ ಮಾಡಿದ್ದರು.
ರಮ್ಯಾ, ನಟಿ ಹಾಗು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಕರ್ನಾಟಕದ ಪ್ರತಿಭೆಗೆ ಫಿದಾ