By: Oneindia Kannada Video Team
Published : February 09, 2018, 12:26

ರಾಮರಾಜ್ಯ ರಥ ಯಾತ್ರೆ ಫೆಬ್ರವರಿ 13ರಿಂದ ಅಯೋಧ್ಯೆಯಲ್ಲಿ ಶುರು

Subscribe to Oneindia Kannada

ಪಕ್ಷೇತರರಿಗಿಂತಲೂ ಕಮ್ಮಿ ಎರಡು ಸೀಟು ಹೊಂದಿದ್ದ ಬಿಜೆಪಿಗೆ ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆ ದೇಶದಲ್ಲಿ ಅಧಿಕಾರದ ಬಾಗಿಲನ್ನೇ ತೆರೆಯಲಾರಂಭಿಸಿತು. ಎಲ್ಲೋ ಇದ್ದ ಬಿಜೆಪಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮೇಲ್ಪಂಕ್ತಿಗೆ ಬರಲಾರಂಭಿಸಿತು. ಕಾಂಗ್ರೆಸ್ ಮುಕ್ತ್ ಭಾರತ್ ಎಂದು ಪ್ರಧಾನಿ ಮೋದಿ, ಅಮಿತ್ ಶಾ ಆದಿಯಾಗಿ ಬಿಜೆಪಿ ಮುಖಂಡರು ಇಂದು ಏನು ಉದ್ಘರಿಸುತ್ತಿದ್ದಾರೋ, ಅದಕ್ಕೆ ಮೂಲ ಬೇರು ಅಡ್ವಾಣಿ ರಥಯಾತ್ರೆ ಅನ್ನುವುದನ್ನು ಯಾರೂ ಮರೆತಿರಲಾರರು, ಮರೆಯಲೂ ಬಾರದು.. ವಿಚಾರಕ್ಕೆ ಬರುವುದಾದರೆ, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೆಂಬಲದೊಂದಿಗೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು 39 ದಿನಗಳ 'ರಾಮರಾಜ್ಯ ರಥಯಾತ್ರೆ' ಯನ್ನು ಆರಂಭಿಸಲು ರಾಮದಾಸ ಸೊಸೈಟಿ ಸಜ್ಜಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!