By: Oneindia Kannada Video Team
Published : December 02, 2017, 11:54

ಮಾಧ್ಯಮದವರ ಕೈಗೆ ಸಿಕ್ಕಿ ಬಿದ್ದ ರಾಮಲಿಂಗಾ ರೆಡ್ಡಿ

Subscribe to Oneindia Kannada

ಮಾಧ್ಯಮಗಳ ಕೈಯಿಂದ ಮೀನಿನಂತೆ ಜಾರುವ ರಾಮಲಿಂಗಾ ರೆಡ್ಡಿ. ಮೈಸೂರು ರಸ್ತೆಯ ಸಿಎಆರ್ ಹೆಡ್ ಕ್ವಾಟರ್ಸ್ ನಲ್ಲಿ ನಡೆದ ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು. ಸಚಿವರ ಜೊತೆಗೆ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಮಳೆಯ ನಡುವೆ ಕೂಡ ನಡೆದ ಕಾರ್ಯಕ್ರಮದಲ್ಲಿ 192 ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.ಗೃಹಸಚಿವ ರಾಮಲಿಂಗಾ ರೆಡ್ಡಿ ಅವರು ಮಾಧ್ಯಮದವರ ಕೈಗೆ ಸಿಗುವುದು ಅಪರೂಪ ಆದರೆ ಸಿಕ್ಕಾಗ ಮಾತ್ರ ಮೀನು ಕೈಯಿಂದ ಜಾರುವಂತೆ ಜಾರಿಕೊಂಡು ಬಿಡುತ್ತಾರೆ. ಇಂದು (ಡಿಸೆಂಬರ್01) ಕೂಡ ಅದೇ ಆಗಿದೆ.ಮೈಸೂರು ರಸ್ತೆಯ ಸಿಎಆರ್ ಹೆಡ್ ಕ್ವಾಟ್ರಸ್ ನಲ್ಲಿ ನಡೆದ ಪೊಲೀಸ್ ವಸತಿಗೃಹ ಶಂಕುಸ್ಥಾಪನೆಗೆ ಆಗಮಿಸಿದ್ದ ಗೃಹಸಚಿವರು ಮಾಧ್ಯಮದವರ ಕೈಗೆ ದೊರಕಿದರು. ಆದರೆ ಮಾಧ್ಯಮದವರ ಪ್ರಶ್ನೆಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿ ಸರಸರನೆ ಹೊರಟುಬಿಟ್ಟರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!