By : Oneindia Kannada Video Team
Published : November 14, 2017, 05:54

ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾರಾ !?

ಡೇರಾ ಸಚ್ಚಾ ಸೌದದ ಮುಖ್ಯಸ್ಥ, ಅತ್ಯಾಚಾರಿ ರಾಮ್ ರಹೀಮ್ ಸಿಂಗ್ ಗೆ ರೋಹ್ಟಕ್ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಸಿಕ್ಕುತ್ತಿದೆಯಾ? ಇತ್ತೀಚೆಗೆ ತಾನೇ ಜಾಮೀನಿನ ಮೇಲೆ ಬಿಡುಗಡೆಯಾದ ರಾಹುಲ್ ಜೈನ್ ಎಂಬ ಕೈದಿ ಎನ್ನುವವರು ಹೇಳುವ ಪ್ರಕಾರ, ಜೈಲಿನ ಅಧಿಕಾರಿಗಳು ಉಳಿದ ಕೈದಿಗಳನ್ನು ನೋಡುವಂತೆ ರಾಮ್ ರಹೀಮ್ ರನ್ನು ನೋಡುತ್ತಿಲ್ಲ. ಅವರಿಗೆ ಬೇರೆಯದೇ ರೀತಿಯ 'ಟ್ರೀಟ್ ಮೆಂಟ್' ಸಿಕ್ಕುತ್ತಿದೆ! "ರಾಮ್ ರಹೀಮ್ ಜೈಲಿಗೆ ಬಂದ ನಂತರ ಇಲ್ಲಿನ ನೀತಿ-ನಿಯಮಗಳೇ ಬದಲಾಗಿವೆ. ಅವರನ್ನು ಇರಿಸಿರುವ ಸೆಲ್ ಗೆ ಯಾರನ್ನೂ ಬಿಡುತ್ತಿಲ್ಲ. ಬೇರೆ ಕೈದಿಗಳ್ಯಾರೂ ಅವರನ್ನು ಇದುವರೆಗೂ ನೋಡಿಯೇ ಇಲ್ಲ. ಅವರಿಗಾಗಿಯೇ ಐಷಾರಾಮಿ ವಾಹನವೊಂದರಲ್ಲಿ ಊಟ ಬರುತ್ತದೆ. ಅವರನ್ನು ನೋಡುವುದಕ್ಕೆಂದು ಬರುವವರಿಗೆ 2 ಗಂಟೆಯವರೆಗೂ ಸಮಯ ನೀಡುತ್ತಾರೆ. ಆದರೆ ನಮ್ಮಂಥ ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಯಾರಾದರೂ ಬಂದರೆ ಇಪ್ಪತ್ತು ನಿಮಿಷಕ್ಕಿಂತ ಹೆಚ್ಚು ಸಮಯ ನೀಡುವುದಿಲ್ಲ" ಎಂದು ಅವರು ಆರೋಪಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!