By : Oneindia Kannada Video Team
Published : February 28, 2018, 12:55

ನಟಿ ಶ್ರೀದೇವಿಯ ಜೀವನದ ಕಾಟು ಸತ್ಯಗಳನ್ನ ಬಯಲು ಮಾಡಿದ ರಾಮ್ ಗೋಪಾಲ್ ವರ್ಮಾ

ನಟಿ ಶ್ರೀದೇವಿ 'ಅತಿಲೋಕ ಸುಂದರಿ'... ಸೂಪರ್ ಸ್ಟಾರ್ ಆಗಿ ಮೆರೆದ ಶ್ರೀದೇವಿಗೆ ಏನು ತಾನೆ ಕಮ್ಮಿ.? ಆಸ್ತಿ, ಅಂತಸ್ತು, ಐಶ್ವರ್ಯ ಎಲ್ಲವೂ ಇದೆ. ಪ್ರೀತಿಸುವ ಗಂಡ, ಮುದ್ದಾದ ಮಕ್ಕಳಿದ್ದಾರೆ. ಕುಟುಂಬದ ಜೊತೆಗೆ ಶ್ರೀದೇವಿ ಸುಖೀ ಜೀವನ ನಡೆಸಿದ್ದಾರೆ ಅಂತೆಲ್ಲಾ ಜನ ಭಾವಿಸಬಹುದು. ಆದ್ರೆ, ಅದೇ ಸತ್ಯನಾ.? ಜನರ ಕಣ್ಣಿಗೆ ಕಾಣುತ್ತಿದ್ದ ಹಾಗೆ, ಶ್ರೀದೇವಿ ಖುಷಿ ಖುಷಿಯಾಗಿ ಇರಲಿಲ್ಲ. ನಂಬರ್ 1 ನಟಿಯಾಗಿ ಚಿತ್ರರಂಗವನ್ನ ಆಳಿದ್ದರೂ, ಶ್ರೀದೇವಿ ಬಳಿ ಒಂದು ಹೊತ್ತಲ್ಲಿ ನಯಾ ಪೈಸೆ ಇರಲಿಲ್ಲ. ಆಸ್ತಿಗಾಗಿ ಶ್ರೀದೇವಿ ವಿರುದ್ಧ ಆಕೆಯ ಸಹೋದರಿಯೇ ಕೋರ್ಟ್ ಮೆಟ್ಟಿಲೇರಿದ್ದೂ ಇದೆ. ಶ್ರೀದೇವಿ ಬದುಕಿನ ಇಂತಹ ಕಹಿ ಸತ್ಯವನ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫೇಸ್ ಬುಕ್ ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!