By : Oneindia Kannada Video Team
Published : December 31, 2017, 12:34

ರಜಿನಿಕಾಂತ್ ಪತ್ರಕರ್ತ ಚೋ ರಾಮಸ್ವಾಮಿಯವರನ್ನ ನೆನೆದು ಭಾವುಕರಾದ ಕ್ಷಣ

ಪ್ರಜಾಪ್ರಭುತ್ವ ವ್ಯವಸ್ಥೆ ಬದಲಾಯಿಸಲು ರಾಜಕೀಯ ಪ್ರವೇಶ ಅನಿವಾರ್ಯವಾಗಿತ್ತು. ರಾಜಕೀಯ ಪ್ರವೇಶದ ಈ ಸಂದರ್ಭದಲ್ಲಿ ನಾನು ಚೋ ರಾಮಸ್ವಾಮಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದರು. ಮಾಧ್ಯಮ ಳ ಬಗ್ಗೆ ನನಗೆ ಅಪಾರ ಗೌರವ, ಭಯ ಭಕ್ತಿ ಎಲ್ಲವೂ ಇದೆ ಎಂದರು. ಅಂಕಣಕಾರ, ರಾಜಕೀಯ ವಿಶ್ಲೇಷಣಕಾರ, ಪತ್ರಕರ್ತ, ನಟ, ಸಂಭಾಷಣಕಾರ, ಸಿನೆಮಾ ನಿರ್ದೇಶಕ, ಜಯಲಲಿತಾ ಹಿತೈಷಿ ಚೋ ರಾಮಸ್ವಾಮಿ ಅವರನ್ನು ಇಂದು ತುಂಬಾ ಸ್ಮರಿಸುತ್ತಿದ್ದೇನೆ. ಅವರು ನೀಡಿದ ಸಲಹೆ ಎಂದಿಗೂ ನಾನು ಪಾಲಿಸುತ್ತೇನೆ ಎಂದರು.'ನನಗೆ ರಾಜಕೀಯ ಹೊಸದಲ್ಲ, ರಾಜಕೀಯ ಪ್ರವೇಶದಿಂದ ಭಯವಾಗಿಲ್ಲ. ಆದರೆ, ನಾನು ಈ ಕ್ಷೇತ್ರದಲ್ಲಿ ಇಂದು ಸಣ್ಣ ಕೂಸು, ಈ ನಿಟ್ಟಿನಲ್ಲಿ ನಾನು ಮಾಧ್ಯಮಗಳ ಬಗ್ಗೆ ಎಚ್ಚರಿಕೆಯಿಂದಿ ುತ್ತೇನೆ. ನನ್ನ ಸರಿ ತಪ್ಪುಗಳನ್ನು ತಿದ್ದುವ ಕಾರ್ಯ ಇವರಿಂದ ನನಗೆ ಆಗಲಿದೆ. ಚೋ ಸಾರ್ ನನಗೆ ಈ ಬಗ್ಗೆಯೇ ಸಲಹೆ ನೀಡಿದ್ದು, ಅವರ ಸಲಹೆ ಪಾಲಿಸಬೇಕಿದೆ. ಅವರಿದಿದ್ದರೆ ನಮ್ಮ ರಾಜ್ಯದ ವ್ಯವಸ್ಥೆ ಹದಗೆಡುತ್ತಿರಲಿಲ್ಲ ಎಂದು ಭಾವುಕರಾದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!