By : Oneindia Kannada Video Team
Published : December 30, 2017, 01:31

ರಜಿನಿಕಾಂತ್ ಕನ್ನಡ ಹಾಗು ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಆಡಿದ ಮಾತುಗಳು

ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ತಮ್ಮ ಅಭಿಮಾನಿಗಳೊಂದಿಗೆ ಸರಣಿ ಸಂವಾದಗಳನ್ನು ನಡೆಸುತ್ತಿದ್ದಾರೆ. ಅದರಂತೆ ಶನಿವಾರ ಚೆನ್ನೈನಲ್ಲಿ ನಡೆದ ತಮ್ಮ ಅಭಿಮಾನಿಗಳ ಸಂವಾದದಲ್ಲಿ ರಜನಿ ಕನ ನಡಾಭಿಮಾನ ಪ್ರದರ್ಶಿಸಿದರು.ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ರಜನಿಕಾಂತ್, "ನಾನು ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದೇನೆ. ನನ್ನ ಕುಟುಂಬ, ಸಹೋದರರು ಕನ್ನಡವನ್ನು ಕಲಿತಿದ್ದಾರೆ. ಕನ್ನಡದಲ್ಲಿಯೇ ಮಾತನಾಡುತ್ತಾರೆ ಎಂದು ಕನ್ನಡಾಭಿಮಾನವನ್ನು ಹೊರಹಾಕಿದರು.ತಮಿಳು ಚಿತ್ರರಂಗಕ್ಕೆ ಬಂದ ನಂತರ ತಮಿಳು ಮಾತನಾಡುವುದನ್ನು ಕಲಿತೆ. ಹಾಗೂ ನನ್ನ ಗುರುಗಳಾದ ನಿರ್ದೇಶಕ ಬಾಲಚಂದರ್ ತಮಿಳು ಕಲಿಯುವಂತೆ ತಿಳಿಸಿದ್ದರು. ಅದರಂತೆ ಜೀವನಕ್ಕಾಗಿ ತಮಿಳು ಮಾತನಾಡಲು ಕಲಿತೆ ಎಂದರು. ಇದೀಗ, ತಮಿಳು ಚಿತ್ರರಂಗ ನನ್ನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಬೆಳಸಿದೆ ಎಂದು ಹೇಳಿದರು.ಬಾರಿ ಕುತೂಹಲ ಕೆರಳಿಸಿರುವ ರಜನಿ ರಾಜಕೀಯ ನಡೆ ಡಿಸೆಂಬರ್ 31ರಂದು ತೆರೆ ಬೀಳಲಿದೆ. ಅಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ರಜನಿಕಾಂತ್ ಅವರೇ ಘೋಷಣೆ ಮಾಡಲಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!