By: Oneindia Kannada Video Team
Published : November 27, 2017, 12:36

ಬೀಫ್ ತಿಂದು ಅಣಕವಾಡಿದ ರಾಜದೀಪ್:ಶೇಮ್ ಲೆಸ್ ಫೆಲೋ ಅಂದ ಟ್ವಿಟ್ಟಿಗರು

Subscribe to Oneindia Kannada

ಬಿಜೆಪಿ, ನರೇಂದ್ರ ಮೋದಿ ಮತ್ತು ಬಲಪಂಥೀಯರ ವಿರುದ್ದ ತಮ್ಮನ್ನು ಗುರುತಿಸಿಕೊಂಡಿರುವ ಪತ್ರಕರ್ತ ಮತ್ತು ಇಂಡಿಯಾ ಟುಡೇ ಕನ್ಸಲ್ಟೆಂಟ್ ಎಡಿಟರ್ ರಾಜದೀಪ್ ಸರ್ದೇಸಾಯಿ, ದನದ ಮಾಂಸದ ವಿಚಾರದಲ್ಲಿ ಮತ್ತೆ ಟ್ವಿಟ್ಟಿಗರಿಂದ ಉಗಿಸಿಕೊಂಡಿದ್ದಾರೆ. ಯಾರಿಗೆ ಹೇಗೆ ಮರ್ಯಾದೆ ಕೊಡಬೇಕು ಅನ್ನುವುದನ್ನು ಮೊದಲು ಕಲಿಯಿರಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಕಿವಿಹಿಂಡಿಸಿಕೊಂಡಿದ್ದ ರಾಜದೀಪ್, ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೀಫ್ ತಿಂದ ಬಗ್ಗೆ ಹೇಳಿದ್ದಾರೆ.ಊಟದ ತಟ್ಟೆ ಅವರವರ ವಿಚಾರಕ್ಕೆ ಬಿಟ್ಟಿದ್ದಾಗಿದ್ದರೂ, ಬೀಫ್ ತಿಂದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, "Guess I remain an anti national" ಎಂದು ತನ್ನ ಟ್ವೀಟ್ ನಲ್ಲಿ ಕಿಚಾಯಿಸಿ, ಟ್ವಿಟ್ಟಿಗರಿಂದ 'ಶೇಮ್ ಲೆಸ್ ಫೆಲೋ' ಎಂದು ರಾಜದೀಪ್ ಉಗಿಸಿಕೊಂಡಿದ್ದಾರೆ.ಶಶಿಧರನ್ ಪಜೂರ್ ಎನ್ನುವ ವ್ಯಕ್ತಿ, ಕೊಲ್ಕತ್ತಾದಲ್ಲಿ ನಡೆದ ಇಂಡಿಯಾ ಟುಡೇ ಕನ್ಕ್ಲೇವ್ ಕಾರ್ಯಕ್ರಮದಲ್ಲಿ, ದನದ ಮಾಂಸ ತಿಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಕ್ಕಾಗಿ ಮತ್ತು ಜಡ್ಜ್ ಲೋಯಾ ಅವರ ಸಂಶಯಾಸ್ಪದ ಸಾವಿನ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಕ್ಕೂ, ರಾಜದೀಪ್ ಅವರನ್ನು ಅಭಿನಂದಿಸಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!