ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search
By : Oneindia Video Kannada Team
Published : December 20, 2017, 10:31
Duration : 02:31

ಗುಜರಾತ್ ನಲ್ಲಿ ಠುಸ್ ಆದ ರಾಹುಲ್ ಗಾಂಧಿಯ 'ಗಬ್ಬರ್ ಸಿಂಗ್ ಟ್ಯಾಕ್ಸ್

ಟ್ವೆಂಟಿ20 ಮ್ಯಾಚ್ ನಲ್ಲಿ ಕೊನೆಯ ಬಾಲ್ ನಲ್ಲಿ ಒಂದು ರನ್ನಿನಿಂದ ಸೋತರೂ, ಸೋಲು ಸೋಲೇ.. ಅದೇ ರೀತಿ ಗುಜರಾತ್ ನಲ್ಲಿ ಕಾಂಗ್ರೆಸ್ 77 ಸ್ಥಾನ ಗೆದ್ದರೂ, 99 ಸ್ಥಾನ ಗೆದ್ದಿರುವ ಬಿಜೆಪಿಯೇ ಸರಕಾರ ರಚಿಸುವುದು. ಕಳೆದ ಬಾರಿ ಗೆದ್ದದ್ದು,ಈ ಬಾರಿ ಗೆದ್ದದ್ದು, ವೋಟ್ ಶೇರ್ ಎಲ್ಲಾ ನಂತರದ ಲೆಕ್ಕಾಚಾರ.ಸರಕು ಮತ್ತು ಸೇವಾ ತೆರಿಗೆ, ಅಪನಗದೀಕರಣ ವಿಚಾರವನ್ನು ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವ್ಯಾಪಾರಿಗಳಿಗೆ ನರೇಂದ್ರ ಮೋದಿ ಸರಕಾರ ತೊಂದರೆ ಕೊಡುತ್ತಿದೆ ಎಂದು ಗುಜರಾತ್ ಚುನಾವಣಾ ಪ್ರಚಾರದ ವೇಳೆ , ಸಾರ್ವಜನಿಕರಿಂದ ಶಿಳ್ಳೆ, ಚಪ್ಪಾಳೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ ಚುನಾವಣೆಯ ದಿನ, ಇದು ವೋಟ್ ಆಗಿ ಪರಿವರ್ತನೆಗೊಂಡಿತಾ?ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವ್ಯಾಖ್ಯಾನಿಸಿದ್ದ ರಾಹುಲ್ ಗಾಂಧಿ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಸಭೆಯಲ್ಲಿ ಮೈಲೇಜ್ ಗಳಿಸುತ್ತಿರುವುದನ್ನು ಅರಿತ ಕೇಂದ್ರ ಸರಕಾರ, ಜಿಎಸ್ಟಿಯಲ್ಲಿ ಭಾರೀ ಬದಲಾವಣೆಯನ್ನು ತಂದು ರಾಜಕೀಯ ದಾಳ ಉರುಳಿಸಿತ್ತು.ಪ್ರಮುಖವಾಗಿ ವರ್ತಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ರಾಹುಲ್ ಹೇಳಿಕೆಗೆ, ಗುಜರಾತಿನ ಸೂರತ್, ರಾಜಕೋಟ್, ಅಹಮದಾಬಾದ್ ಮುಂತಾದ ನಗರ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಧ್ವನಿಗೂಡಿಸಿದ್ದರು. ಇದು ಬಿಜೆಪಿಯ ಸ್ಟ್ರಾಂಗ್ ಬೆಲ್ಟಿಗೆ ಸಂಚಕಾರ ತಂದೊಡ್ಡಬಹುದೆಂದು ಹೇಳಲಾಗುತ್ತಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more