By : Oneindia Kannada Video Team
Published : December 13, 2017, 11:40

ರಾಹುಲ್ ಗಾಂಧಿ ರುದ್ರಾಕ್ಷಿ ಮಾಲೆ ಹಾಕೊಂಡಿರೋ ಹಿಂದಿದೆ ಒಂದು ರಹಸ್ಯ!

ರಾಹುಲ್ ಗಾಂಧಿಯವರು ಮಂಗಳವಾರ ಶ್ವೇತವಸ್ತ್ರಧಾರಿಯಾಗಿ ಅಹ್ಮದಾಬಾದ್ ನಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿನ ಕೋಣೆಯೊಳಗೆ ಅರ್ಚಕ ದಿಲೀಪ್ ದಾಸ್ ಅವರೊಂದಿಗೆ, ಮಾಧ್ಯಮದ ಕಣ್ಣು ತಪ್ಪಿಸಿ ಹೋಗಿದ್ದಾದರೂ ಏಕೆ? ಡಿಸೆಂಬರ್ 16ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ, ಗುಜರಾತ್ ಎರಡನೇ ಹಂತದ ಮತದಾನಕ್ಕೂ ಮುನ್ನ ಭರ್ಜರಿ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ ಅವರನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರು ಜಗನ್ನಾಥ ದೇವಾಲಯದ ಕೋಣೆಯೊಳಗೆ ಸೀಕ್ರೆಟ್ ಆಗಿ ಹೋಗಿದ್ದೇಕೆ ಎಂಬುದು ಗೊತ್ತಾಗುತ್ತದೆ.ಅವರ ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಕಾಣಿಸಿಕೊಂಡಿದೆ. ತಮ್ಮನ್ನು ಸುತ್ತಿರುವ ಕಷ್ಟಕೋಟಲೆಗಳಿಂದ ರಕ್ಷಣೆ ಪಡೆಯಲು ಅವರು ರುದ್ರಾಕ್ಷಿ ಮಾಲೆಯ ಮೊರೆ ಹೋದರಾ ಎಂಬ ಅನುಮಾನ ಹಲವರನ್ನು ಕಾಡಲು ಆರಂಭಿಸಿದೆ. ದೇವಸ್ಥಾನಕ್ಕೆ ಹೋಗಿ ಬಂದ ನಂತರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರ ಕೊರಳಲ್ಲಿ ರುದ್ರಾಕ್ಷಿ ಮಾಲೆ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!