By : Oneindia Kannada Video Team
Published : November 06, 2017, 07:15

ಭಗವದ್ಗೀತೆಗೆ ಮೋದಿ ಬೇರೆಯದ್ದೇ ಅರ್ಥ ಕೊಟ್ಟಿದ್ದಾರೆ, ಎಂದ ರಾಹುಲ್ ಗಾಂಧಿ

ಭಗವದ್ಗೀತೆಗೆ ಬೇರೆಯದೇ ಅರ್ಥ ನೀಡಿದ್ದಾರೆ ಮೋದಿ: ರಾಹುಲ್ ಲೇವಡಿ! ಹಿಂದುಗಳ ಪವಿತ್ರ ಗ್ರಂಥ ಭಗವದ್ಗೀತೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಆದ ಅರ್ಥ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.ಒಂದಿಲ್ಲೊಂದು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆಯುತ್ತಲೇ ಇರುವ ರಾಹುಲ್ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಭಗವದ್ಗೀತೆ, ಕರ್ಮವನ್ನು ನೀನು ಮಾಡು, ಅದರ ಫಲಾಫಲ ದೇವರಿಗೆ ಬಿಟ್ಟಿದ್ದು ಎನ್ನುತ್ತದೆ. ಆದರೆ ಮೋದಿಯವರು ನೀಡುವ ವ್ಯಾಖ್ಯಾನ ಬೇರೆಯದೇ ಇದೆ. ಬೇರೆಯವರ ಶ್ರಮದ ಫಲವನ್ನು ನೀನು ತಿನ್ನು, ಕೆಲಸ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಬೇಡ ಎಂಬುದು ಮೋದಿಯವರು ನೀಡುವ ಅರ್ಥ ಎಂದು ಕಾಂಗ್ರೆಸ್ ಯುವರಾಜ ರಾಹುಲ್, ಮೋದಿಯವರನ್ನು ಛೇಡಿಸಿದ್ದಾರೆ.ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ರಾಹುಲ್ ಗಾಂಧಿ, ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆಯೂ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!