By: Oneindia Kannada Video Team
Published : December 18, 2017, 01:41

ರಾಹುಲ್ ಗಾಂಧಿಯೇನಾದರೂ ಸನ್ಯಾಸಿಯಾಗ್ಬಿಟ್ರೆ?

Subscribe to Oneindia Kannada

"ರಾಹುಲ್ ಗಾಂಧಿಯವರು ದೇವಾಲಯಗಳಿಗೆ ಭೇಟಿ ನೀಡಿದ್ದಕ್ಕೆ ಗುಜರಾತಿನಲ್ಲಿ ಕಾಂಗ್ರೆಸ್, ಬಿಜೆಪಿಗೆ ಈ ಪರಿ ಸ್ಪರ್ಧೆ ನೀಡುತ್ತಿದೆ. ಕೇವಲ ದೇವಾಲಯಗಳಿಗೆ ಭೇಟಿ ನೀಡಿದ್ದಕ್ಕೇ ಇಂಥ ಫಲಿತಾಂಶ ಬಂದರೆ, ಇನ್ನು ರಾಹುಲ್ ಗಾಂಧಿ ಸನ್ಯಾಸ ಸ್ವೀಕರಿಸಿಬಿಟ್ಟರೆ ಏನಾದೀತು..?" ಹಾಗಂತ ಟ್ವಿಟ್ಟರ್ ನಲ್ಲೊಬ್ಬರು ಪ್ರಶ್ನಿಸಿದ್ದಾರೆ! ಹೌದು, ಗುಜರಾತ್ ಚುನಾವಣೆಗೆ ಮತ್ತಷ್ಟು ಕಳೆ ಸಿಕ್ಕಿದ್ದೇ ಆ ಕಾರಣಕ್ಕೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದೆಷ್ಟು ದೇವಾಲಯಗಳಿಗೆ ಎಡತಾಕಿದ್ದರೋ! ಹೀಗೆ ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ಮಸೀದಿ - ಚರ್ಚ್ ಭೇಟಿ, ಹಿಂದುಗಳ ಓಲೈಕೆಗೆ ಮಂದಿರ ಭೇಟಿ ಹೊಸತೇನಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಯೂ ಇಲ್ಲ. ಆದರೆ ರಾಹುಲ್ ಗಾಂಧಿಯವರ ದೇವಾಲಯ ಭೇಟಿಯನ್ನು ಮಾತ್ರ ಟ್ವಿಟ್ಟಿಗರು ಅಣಕಿಸುತ್ತಿರೋದು ಸುಳ್ಳಲ್ಲ.ಕಾಂಗ್ರೆಸ್ ಈ ಅನಿರೀಕ್ಷಿತ ಸಾಧನೆಗೆ ರಾಹುಲ್ ರ ದೇವಾಲಯ ಭೇಟಿಯೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!