By: Oneindia Kannada Video Team
Published : October 31, 2017, 02:37

ಟಿಪ್ಪು ಜಯಂತಿಗೆ ರಾಜ್ಯದಾದ್ಯಂತ ತಡೆ : ಪ್ರಮೋದ್ ಮುತಾಲಿಕ್

Subscribe to Oneindia Kannada

ರಾಜ್ಯ ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಂಘ ಪರಿವಾರದ ಸಂಘಟನೆಗಳೊಂದಿಗೆ ಸೇರಿ ಶ್ರೀರಾಮ ಸೇನೆ ರಾಜ್ಯದೆಲ್ಲೆಡೆ ತಡೆಯೊಡ್ಡಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ..ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಸ್ಲಿಂ ಮತಗಳಿಗೋಸ್ಕರ ದೇಶದ್ರೋಹಿ, ಕನ್ನಡ ದ್ರೋಹಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು...ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಸ್ಲಿಂ ಮತಗಳಿಗೋಸ್ಕರ ದೇಶದ್ರೋಹಿ, ಕನ್ನಡ ದ್ರೋಹಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಬ್ಬ ಮತಾಂಧನನ್ನು ವೈಭವೀಕರಿಸಿ ರಾಜ್ಯ ಸರ್ಕಾರ ಜಯಂತಿ ಆಚರಿಸುತ್ತಿರುವುದು ದುರಂತ ಎಂದು ಅವರು ವಿಷಾದ ವ್ಯಕ್ತಪಡಿಸಿದರು..ಟಿಪ್ಪು ಸುಲ್ತಾನ್ ಎಸಗಿದ ಕ್ರೂರತೆಯ ಬಗ್ಗೆ ಆಧಾರ, ದಾಖಲೆ ಸಹಿತ ವಿವರಿಸುವ ಕಿರು ಪುಸ್ತಕ ಒಂದು ಮುದ್ರಣವಾಗುತ್ತಿದ್ದು ಸದ್ಯದಲ್ಲೇ ಅದನ್ನು ಬಿಡುಗಡೆಗೊಳಿಸಲಾಗುವುದು ಎಂದವರು ಹೇಳಿದರು. ಈ ಕಿರು ಪುಸ್ತಕದ 1 ಲಕ್ಷ ಪ್ರತಿಗಳನ್ನು ರಾಜ್ಯದಾದ್ಯಂತ ವಿತರಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!