By : Oneindia Kannada Video Team
Published : December 18, 2017, 12:31

ಮೋದಿ ಜೊತೆಗಿನ ಹಳೇ ಫೋಟೋವೊಂದನ್ನ ಹಂಚಿಕೊಂಡ ಪ್ರೇಮ್ ಕುಮಾರ್ ಧುಮಾಲ್

ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಸದ್ಯದ ಟ್ರೆಂಡ್ ನಂತೆ ಬಿಜೆಪಿ ಸರಳ ಬಹಮತದತ್ತ ದಾಪುಗಾಲು ಇಟ್ಟಿದೆ. 68 ಸ್ಥಾನಗಳ ಪೈಕಿ ಬಹುಮತಕ್ಕೆ ಬೇಕಾದ 35 ಮ್ಯಾಜಿಕ್ ನಂಬರ್ ಯಾರು ದಾಟಲಿದ್ದಾರೆ ಸದ್ಯದಲ್ಲೇ ತಿಳಿಯಲಿದೆ.ಈ ನಡುವೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಪ್ರಧಾನಿ ಮೋದಿ ಅವರ ಜತೆಗಿನ ಹಳೆ ಚಿತ್ರವನ್ನು ಹಂಚಿಕೊಂಡು ನನ್ನ ಬದುಕಿನ ಮ್ಯಾಜಿಕಲ್ ಘಟನೆ ಎಂದಿದ್ದಾರೆ.ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ವೀರಭದ್ರಸಿಂಗ್(83) ಅಧಿಕಾರ ಕಳೆದುಕೊಳ್ಳಲಿದ್ದು, ಪ್ರೇಮ್ ಕುಮಾರ್ ಧುಮಾಲ್(73) ಸಿಎಂ ಆಗುವ ಅವಕಾಶಗಳಿವೆ' ಎಂದು ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿ ವರದಿ ಹೇಳಿದೆ. ಆದರೆ, ಮತದಾರರ ತೀರ್ಪು ಯಾರ ಕಡೆ ಇದೆ ಎಂಬುದು ಇಂದು ತಿಳಿಯಲಿದೆ.2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್(83) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವೀರಭದ್ರ ಹಾಗೂ ಧುಮಾಲ್ ಇಬ್ಬರಿಗೂ ಇದು ಬಹುಶಃ ಕೊನೆ ಚುನಾವಣೆ. ಧುಮಾಲ್ ಅವರು ಸಿಎಂ ಪಟ್ಟಕ್ಕೇರಿದರೂ 2 ವರ್ಷ ಕಾಲ ಮಾತ್ರ ಸಿಎಂ ಆಗುವ ಯೋಗ ಪಡೆಯಲಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!