By : Oneindia Kannada Video Team
Published : December 06, 2017, 12:53

ಪ್ರತಾಪ್ ಸಿಂಹ ವಿನಯ್ ಕುಲಕರ್ಣಿ ಟ್ವಿಟ್ಟರ್ ಸಮರ ಥರಹೇವಾರಿ ಕಾಮೆಂಟ್ಸ್

ಸದಾ ಒಂದಿಲ್ಲೊಂದು ವಿವಾದದ ಮೂಲಕವೇ ಸುದ್ದಿಯಾಗುವ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಇದೀಗ ತಮ್ಮ ಮಾತಿನ ವರಸೆಯನ್ನು ಸಚಿವ ವಿನಯ್ ಕುಲಕರ್ಣಿ ಅವರತ್ತ ತಿರುಗಿಸಿದ್ದಾರೆ. ಹನುಮ ಜಯಂತಿ ಸಮಯದಲ್ಲಿ ಮೈಸೂರಿನ ಹುಣಸೂರಿನಲ್ಲಿ ನಡೆದ ವಿವಾದಾತ್ಮಕ ಘಟನೆಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ವಿರುದ್ಧ ಹರಿಯಾಯ್ದಿದ್ದ ಧಾರವಾಡದ ವಿನಯ್ ಕುಲಕರ್ಣಿ, 'ಪ್ರತಾಪ್ ಸಿಂಹ ಅವರನ್ನು ಒಂದು ಒಳ್ಳೆಯ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕು' ಎಂದಿದ್ದರು.ಸಂಸದರೊಬ್ಬರ ವಿರುದ್ಧ ಇಂಥ ಪದಬಳಕೆ ಮಾಡಿದ ವಿನಯ್ ಕುಲಕರ್ಣಿಯವರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ, ವಿನಯ್ ಕುಲಕರ್ಣಿ ವಿರುದ್ಧ ಪ್ರತಾಪ್ ಸಿಂಹ ಟ್ವೀಟ್ ಮಾಡಿ, "ಹೀಗೊಂದು ರಸಪ್ರಶ್ನೆ: 2007ರಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಶೂಟೌಟ್ನಲ್ಲಿ ಮುಖ್ಯ ಆರೋಪಿಯಾಗಿದ್ದವನ ಸಹೋದರ ಹಾಗು ವೈದ್ಯರಿಗೆ ಕಪಾಳಕ್ಕೆ ಹೊಡೆದಿದ್ದಲ್ಲದೆ ಜಿಲ್ಲಾಪಂಚಾಯತ್ ಸದಸ್ಯರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ಪುಂಡ ಯಾರು?!" ಎಂದು ಪರೋಕ್ಷವಾಗಿ ಪ್ರಶ್ನಿಸಿ, ವಿನಯ ಕುಲಕರ್ಣಿ ಅವರ ಕಾಲೆಳೆದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!