By: Oneindia Kannada Video Team
Published : November 28, 2017, 05:57

ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್

Subscribe to Oneindia Kannada

ಬಾಬರನಂತೆ ಸುನ್ನಿ ಮುಸ್ಲಿಮರ ನಾಶ ಮಾಡುವ ಬೆದರಿಕೆ ಹಾಕಿದ ಮುತಾಲಿಕ್. "ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರು ಒಪ್ಪಿಗೆ ನೀಡಿದ್ದಾರೆ. ಆದರೆ ಸುನ್ನಿ ಮುಸ್ಲಿಮರು ಮಾತ್ರ ಅಡ್ಡಗಾಲು ಇಡುತ್ತಿದ್ದಾರೆ. ಒಂದು ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ ಮಾಡಿದಲ್ಲಿ ಬಾಬರನನ್ನ ಹೇಗೆ ನಾಶ ಮಾಡಿದೆವೋ, ಹಾಗೇ ನಿಮ್ಮನ್ನು ನಾಶ ಮಾಡ್ತೇವೆ" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮೂರ್ತಿ ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ , ಹಿಂದೂ - ಮುಸ್ಲಿಮರು ಹೇಗೆ ಒಗ್ಗಟ್ಟಾಗಿದ್ದೇವೋ ಹಾಗೇ ಇರೋಣ ಎಂದು ಹೇಳಿದರು.ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಯವರ ಜೊತೆ ಕೈಜೋಡಿಸಿದ್ದಾರೆ. ಅದೇ ರೀತಿ ಸುನ್ನಿ ಮುಸ್ಲಿಮರೂ ಕೈ ಜೋಡಿಸಬೇಕು. ಅಫ್ಘನಿಸ್ತಾನದಿಂದ ಬಂದ ಆಕ್ರಮಣಕಾರ ಬಾಬರ್ ದೇವಸ್ಥಾನ ಕೆಡವಿ ಮಸೀದಿ ಕಟ್ಟಿಸಿದ್ದ. ಆತನ ಖಡ್ಗಕ್ಕೆ ಹೆದರಿ ಮತಾಂತರ ಆಗಿದ್ದವರೇ ಇಂದಿನ ಮುಸ್ಲಿಮರು ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!