By : Oneindia Kannada Video Team
Published : December 18, 2017, 05:00

ಮೋದಿಗೆ ವ್ಯಂಗವಾಗಿ ಟ್ವೀಟ್ ಮಾಡಿದ ನಟ ಪ್ರಕಾಶ್ ರಾಜ್ ( ರೈ ) #justasking

ನಟ ಪ್ರಕಾಶ್ ರೈ ಅವರು ಮತ್ತೊಮ್ಮೆ ಬಿಜೆಪಿ ವಿರುದ್ಧ ತಮ್ಮ ವಾಗ್ಬಾಣ ಬಿಟ್ಟಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.ಪ್ರೀತಿಯ ಪ್ರಧಾನಮಂತ್ರಿಗಳೇ, ಗೆಲುವಿಗಾಗಿ ನಿಮಗೆ ಅಭಿನಂದನೆ, ಆದರೆ, ನಿಮಗೆ ನಿಜಕ್ಕೂ ಸಂತೋಷವಾಗಿದೆಯೇ? ಸುಮ್ನೆ ಕೇಳುತ್ತಿದ್ದೇನೆ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.ನಂತರ ಇನ್ನಷ್ಟು ವಿಸ್ತರಿಸಿ, ನಿಮ್ಮ ವಿಕಾಸ ಬಲದಿಂದ 150ಕ್ಕೂ ಅಧಿಕ ಸ್ಥಾನ ಗಳಿಸಬೇಕಾಗಿತ್ತಲ್ಲವೆ? ಒಂದು ಕ್ಷಣ ಸುಮ್ಮನೆ ಇದನ್ನು ಅರ್ಥಮಾಡಿಕೊಳ್ಳುವಿರಾ ಎಂದು ಮೂರು ಅಂಶಗಳನ್ನು ಹಾಕಿದ್ದಾರೆ.ಗುಜರಾತಿನಲ್ಲಿ 182 ಸ್ಥಾನಗಳ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದ್ದು, ಸದ್ಯದ ಟ್ರೆಂಡ್ ನಂತೆ ಬಿಜೆಪಿ ಮ್ಯಾಜಿಕ್ ನಂಬರ್ 92 ದಾಟಿ ಮುನ್ನುಗ್ಗುತ್ತಿದ್ದು ನೂರರ ಗಡಿಯಲ್ಲಿದೆ. ಕಾಂಗ್ರೆಸ್ 81, ಇತರೆ 2 ರಷ್ಟಿದೆ.ಇನ್ನು ಆ 3 ಅಂಶಗಳು ಯಾವುವು ಎಂದು ತಿಳಿಯಲು ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!