By: Oneindia Kannada Video Team
Published : December 14, 2017, 06:51

ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?

Subscribe to Oneindia Kannada

ಬೆಂಗಳೂರು, ಮಾರ್ಚ್ 09: ಮಾರ್ಚ್ 9 ರ ಸಂಜೆ 5.30ರ ನಂತರದ ಎಕ್ಸಿಟ್ ಪೋಲ್ 2017ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಉತ್ತರಪ್ರದೇಶದ ಏಳನೇ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಘೋಷಣೆಯಾಗಲಿದೆ. ಇಲ್ಲಿ ತನಕ ಎಕ್ಸಿಟ್ ಪೋಲ್ ಎಷ್ಟು ನಿಜವಾಗಿದೆ? ಎಷ್ಟು ಸುಳ್ಳಾಗಿದೆ. ಸಂಪೂರ್ಣ ಹಿನ್ನೋಟ ಇಲ್ಲಿದೆ..ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಯಾವತ್ತಿಗೂ ಕುತೂಹಲಕಾರಿಯಾಗಿರುತ್ತದೆ. ಎಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿಯುವ ಬಾಬಾಗಳಂತೆ ಎಲ್ಲಾ ಮಾಧ್ಯಮಗಳ ಮುಂದೆ ಆಸಕ್ತರು ಕುಳಿತು ವೀಕ್ಷಿಸುತ್ತಾರೆ.ಕೆಲವೊಮ್ಮೆ ಎಕ್ಸಿಟ್ ಪೋಲ್ ಬಂಪರ್ ಫಲಿತಾಂಶ ನೀಡಿದರೆ, ಮತ್ತೊಮ್ಮೆ ಸಂಪೂರ್ಣ ವ್ಯತಿರಿಕ್ತ ರಿಸಲ್ಟ್ ನೀಡುತ್ತದೆ. ಇಲ್ಲಿ ತನಕ ಯಾವ ಸಮೀಕ್ಷೆ ಫಲ ಕಂಡಿದೆ ನೋಡೋಣ.ಫೆಬ್ರವರಿ 2015ರಲ್ಲಿ ದೆಹಲಿ ಚುನಾವಣೆಯಲ್ಲಿ ಇಂಡಿಯಾ ನ್ಯೂಸ್- ಆಕ್ಸಿಸ್ ನೀಡಿದ ಸಮೀಕ್ಷೆ ವರದಿ ಬಹುತೇಕ ನಿಜವಾಯಿತು. ಆಮ್ ಆದ್ಮಿ ಪಕ್ಷ 53 ಸ್ಥಾನಗಳಿಸಲಿದೆ ಎಂದಿತ್ತು. ಎಎಪಿ 67 ಸ್ಥಾನ ಗಳಿಸಿ ಅಧಿಕಾರ ಹಿಡಿಯಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!