By : Oneindia Kannada Video Team
Published : June 29, 2017, 09:50

ಕ್ಯಾಮೆರಾದಲ್ಲಿ ಸೆರೆಯಾದ ನಮ್ಮ ರಾಜಕಾರಣಿಗಳ ಕುಕೃತ್ಯಗಳು

ಯಾವಾಗ ವ್ಯಕ್ತಿಯೊಬ್ಬರು ಪ್ರಸಿದ್ಧರಾಗುತ್ತಾರೋ ಅಂದಿನಿಂದ ಅವರ ಮಾತು, ಕೃತಿಗಳೆಲ್ಲಾ ಸಾರ್ವಜನಿಕವಾಗುತ್ತವೆ. ಒಂದು ವೇಳೆ ನಮಗೆ ಇಲ್ಲ ಅನ್ನಿಸಿದರೂ ಮಾಧ್ಯಮಗಳು ಮಾತ್ರ ಬಿಡುವುದಿಲ್ಲ. ಇವರ ಪ್ರತಿ ನಡೆಯನ್ನೂ ಕ್ಯಾಮೆರಾಮನ್‌ಗಳು ತದೇಕಚಿತ್ತದಿಂದ ಹಿಂಬಾಲಿಸುತ್ತಾ ಯಾವುದಾದರೊಂದು ಚಿಕ್ಕ ತಪ್ಪು ಅಥವಾ ಅನೂಚಾನವಾದ ನಡವಳಿಕೆಗಾಗಿ ಕಾಯುತ್ತಾ ಇರುತ್ತಾರೆ. ಈ ಕ್ರಿಯೆಯ ಮೂಲಕವೇ ನಮ್ಮ ಕೆಲವಾರು ರಾಜಕಾರಣಿಗಳ ಕುಕೃತ್ಯಗಳು ಬಯಲಾಗಿವೆ. ಇತರರಿಗೆ ಎಚ್ಚರಿಕೆಯ ಗಂಟೆಯೂ ಆಗಿವೆ. ನಮ್ಮ ಕೆಲವು ಚತುರ ಕ್ಯಾಮೆರಾಮನ್‌ಗಳು ಕ್ಲಿಕ್ಕಿಸಿದ ಕೆಲವು ಚಿತ್ರಗಳನ್ನು ಇಂದು ಸಂಗ್ರಹಿಸಲಾಗಿದ್ದು ಕೆಲವು ನಿಮ್ಮ ಮೊಗದಲ್ಲಿ ನಗು ಮೂಡಿಸಿದರೆ ಕೆಲವು ಹಲ್ಲು ಕಡಿಯುವಂತೆ ಮಾಡಬಹುದು...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!