By: Oneindia Kannada Video Team
Published : January 24, 2018, 07:17

ಕಾವ್ಯ ಕಾಯಕದ ಗಿಣಿ ಜಯಂತ್ ಕಾಯ್ಕಿಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Subscribe to Oneindia Kannada

ಜನವರಿ 24 ಬಂತೆಂದರೆ ಸಾಹಿತ್ಯ ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ ಕಾರಣ ಡಾ . ಜಯಂತ್ ಕಾಯ್ಕಿಣಿ ಅವರ ಜನ್ಮ ದಿನ .
ತಮ್ಮ ಸಣ್ಣ ಕತೆ, ಕಾವ್ಯ , ನಾಟಕಗಳಲ್ಲದೇ ನವಿರಾದ ಸಿನಿಮಾ ಸಾಹಿತ್ಯದ ಮೂಲಕ
ಕನ್ನಡಿಗರೆದೆಯಲ್ಲಿ ಹೆಮ್ಮರವಾಗಿ ಬೆಳೆದೆರುವಂಥ ಜಯಂತ್ ಕಾಯ್ಕಿಣಿಯವರು ಸಾಹಿತ್ಯ
ಕೃಷಿಯಲ್ಲಿ ತಮ್ಮದೇ ರೀತಿಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಯುವ ಜನತೆಗೆ ಕನ್ನಡ
ಸಾಹಿತ್ಯ ಪರಂಪರೆ , ಓದು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ , ಓದಿನ ಬಗ್ಗೆ ಆಸಕ್ತಿ
ಬೆಳೆಸುವ ಕೆಲಸ ಮಾಡುತ್ತಿದ್ದಾರೆ .
ಜಯಂತ್ ಕಾಯ್ಕಿಣಿಯವರ ಹುಟ್ಟುಹಬ್ಬದ ಈ ಸುಸಂದರ್ಭದಲ್ಲಿ ಕಾವ್ಯ ಪ್ರೇಮಿಗಳು ಅವರ
ಅಭಿಮಾನಿಗಳು ಒನ್ಇಂಡಿಯಾ ಕನ್ನಡ ತಂಡಕ್ಕೆ ಕಳುಹಿಸಿರುವ ಕೆಲವು ಕಾವ್ಯ ವಾಚನದ ವಿಡಿಯೋಗಳು ಇಲ್ಲಿವೆ .
ನೋಡಿ ಕೇಳಿ ಜತೆಗೆ ಜಯಂತರ ಭಾವಲೋಕದಲ್ಲಿ ವಿಹರಿಸಿ ಬನ್ನಿ .

ನಮ್ಮನಿಮ್ಮೆಲ್ಲರ ಪರವಾಗಿ ಭಾವಲೋಕದ ರಾಯಭಾರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!