By : Oneindia Kannada Video Team
Published : January 05, 2018, 11:20

ಯಾವ ಯಾವ ಆಟಗಾರರು ಅವರ ತಂಡದಲ್ಲೇ ಉಳಿದಿದ್ದಾರೆ ?

ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ ಬೀಸುವುದು ಖಚಿತವಾಗಿದೆ. ಯಾವ ಆಟಗಾರರನ್ನು ಯಾವ ತಂಡ ಉಳಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಸ್ಟಾರ್ ಆಟಗಾರರಾದ ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ತಮ್ಮ ತಮ್ಮ ತಂಡಗಳಲ್ಲೇ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಡಲಾಗಿದೆ. ಅವರು ಮತ್ತೊಮ್ಮೆ ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾಗಬಹುದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಹೊಸ ನಿಯಮಾವಳಿಗಳ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ. ತಂಡದ ಬಳಿ ಇರಿಸಿಕೊಳ್ಳಬಹುದಾದ ಮೊತ್ತ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ, ಆಟಗಾರರ ಸಂಬಳ ಇನ್ನಿತರ ವಿಷಯಗಳಲ್ಲಿ ಭಾರಿ ಬದಲಾವಣೆಯಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!