By : Oneindia Kannada Video Team
Published : January 10, 2018, 11:34

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ಡೀಸೆಲ್ ಬೆಲೆ ಆಗಸದೆತ್ತರಕ್ಕೆ ಚಿಮ್ಮಿದೆ.ಕೇಂದ್ರ ಸರ್ಕಾರವು ಪೆಟ್ರೋಲ್ , ಡೀಸೆಲ್ ದರವನ್ನು ಏರಿಸಿದ್ದು, ಸೋಮವಾರ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬಂದಿದೆ.ಪೆಟ್ರೋಲ್ ಬೆಲೆ ಲೀಟರ್ ಗೆ ರೂ.1.55 , ಡೀಸೆಲ್ ಬೆಲೆ ಲೀಟರ್‌ಗೆ ರೂ.1.50 ಕ್ಕೆ ಏರಿಸಲಾಗಿದೆ. ಇದೀಗ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 71.72 ಮತ್ತು ಲೀಟರ್ ಡೀಸೆಲ್ ಬೆಲೆ 61.83 ಆಗಿದೆ.ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಪ್ರಸ್ತಾವ ಗುಜರಾತ್ ಚುನಾವಣೆಗೂ ಮುಂಚೆಯೇ ಕೇಂದ್ರ ಸರ್ಕಾರದ ಮುಂದಿತ್ತು ಎನ್ನಲಾಗಿದೆ, ಇದೀಗ ಗುಜರಾತ್ ಚುನಾವಣೆ ಮುಗಿದ ಬೆನ್ನಲ್ಲೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಲಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.ಉತ್ತಮ ಬೇಡಿಕೆಯಿಂದ ಕಚ್ಚಾ ತೈಲ ಬೆಲ ದರದ ಏರಿಕೆ ಹಾಗೂ ಒಪೆಕ್ ಮತ್ತು ರಷ್ಯಾದಿಂದ ಉತ್ಪಾದನೆ ಕಡಿಮೆ ಮಾಡಿವೆ ಎಂಬುದು ಇಂದಿನ ಸ್ಥಿತಿಗೆ ಕಾರಣ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!