By: Oneindia Kannada Video Team
Published : December 11, 2017, 12:58

ಪರೇಶ್ ನಿಗೂಢ ಸಾವಿನ ನಂತರ ಕಟ್ಟೆಯೊಡೆಯಿತೇ ಹಿಂದುಗಳ ತಾಳ್ಮೆ?

Subscribe to Oneindia Kannada

ಪರೇಶ್ ಮೆಸ್ತಾ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ತಲೆದೋರಿದೆ. ಡಿ.6 ರಂದು ನಾಪತ್ತೆಯಾಗಿದ್ದ ಪರೇಶ್ ಮೆಸ್ತಾ ಡಿ.8 ರಂದು ಹೊನ್ನಾವರದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ನೋಡಲು ಭೀಕರವಾಗಿದ್ದ ಅವರ ಶವ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಕೋಮುಘರ್ಷಣೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪರೇಶ್ ಹೀಗೆ ಶವವಾಗಿ ಪತ್ತೆಯಾಗಿರುವುದರಿಂದ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳು, ಇದರಲ್ಲಿ ಮತೀಯ ಶಕ್ತಿಯ ಕೈವಾಡವಿದೆಯೆಂದು ದೂರಿದ್ದವು. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೃತ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದರು.ಪರೇಶ್ ಅವರ ಶವ ಸಂಪೂರ್ಣ ಕಪ್ಪಾಗಿದ್ದು, ಭೀಕರವಾಗಿದೆ. ಸಾಯುವುದಕ್ಕೂ ಮುನ್ನ ಅವರ ದೇಹದ ಮೇಲೆ ಕಿಡಿಗೇಡಿಗಳು ಕುದಿಯುತ್ತಿರುವ ಎಣ್ಣೆಯನ್ನು ಸುರಿದಿರಬಹುದು ಎಂದು ಅನುಮಾನಿಸಲಾಗಿದೆ. ಅಲ್ಲದೆ ಅವರ ಕೈಮೇಲಿದ್ದ ಜೈ ಶ್ರೀರಾಮ್ ಎಂಬ ಹಚ್ಚೆಯನ್ನೂ ಕೊಚ್ಚಿ ತೆಗೆಯಲಾಗಿದೆ, ಅವರ ತಲೆಯ ಮೇಲೂ ನಾಲ್ಕೈದು ಕಡೆ ಮಚ್ಚಿನ ಗುರುತುಗಳಿವೆ. ಆದ್ದರಿಂದಲೇ ಇದು ಮತಾಂಧರ ಕೃತ್ಯ ಎನ್ನಲಾಗುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!