By: Oneindia Kannada Video Team
Published : October 31, 2017, 07:21

ನಿಮ್ಮ ಅಂಗೈಯಲ್ಲಿ ಜೀವರಕ್ಷಕ ರೇಖೆ ಇದ್ರೆ ನೀವು ಅದೃಷ್ಟವಂತರು!

Subscribe to Oneindia Kannada

ಅಂಗೈಯಲ್ಲಿ 'ಜೀವರಕ್ಷಕ ರೇಖೆ' ಇರುವವರು ತುಂಬಾನೇ ಅದೃಷ್ಟವಂತರು! ಜ್ಯೋತಿಷ್ಯಾಸ್ತ್ರ ಭಾರತದಲ್ಲಿ ಪ್ರಾರಂಭವಾದರೂ ಇದರ ಜನಪ್ರಿಯತೆಯ ಕಾರಣದಿಂದ ಈಜಿಪ್ಟ್, ಚೀನಾ ಹಾಗೂ ಯೋರೋಪ್ ಖಂಡದ ದೇಶಗಳಲ್ಲಿಯೂ ನಿಧಾನಕ್ಕೆ ವ್ಯಾಪಿಸಿತು. ಜ್ಯೋತಿಷ್ಯಾಸ್ತ್ರದಲ್ಲಿ ವ್ಯಕ್ತಿಯ ಹಸ್ತವನ್ನು ಸೂಕ್ಷ್ಮವಾಗಿ ಗಮನಿಸಿ ರೇಖೆಗಳನ್ನು ನೋಡುವ ಮೂಲಕ ಆ ವ್ಯಕ್ತಿಯ ನಡತೆ ಹಾಗೂ ಮುಂದಾಗಲಿರುವ ಘಟನೆಗಳ ಬಗ್ಗೆ ಸ್ಥೂಲವಾಗಿ ತಿಳಿಸಲಾಗುತ್ತದೆ.ಈ ಜಗತ್ತಿನ ಎರಡು ವ್ಯಕ್ತಿಗಳ ಹಸ್ತಗಳ ರೇಖೆಗಳು ಒಂದೇ ಬಗೆಯದ್ದಾಗಿರುವುದಿಲ್ಲ. ಈ ರೇಖೆಗಳನ್ನು ಅಭ್ಯಸಿಸುವ ಮೂಲಕ ಬಹಳಷ್ಟನ್ನು ಕಲಿಯಬಹುದು. ಹಸ್ತದಲ್ಲಿ ಕೆಲವು ರೇಖೆಗಳು ಪ್ರಮುಖವಾಗಿ ಹಾಗೂ ಹೆಚ್ಚು ದಪ್ಪ ಹಾಗೂ ಸ್ಪಷ್ಟವಾಗಿದ್ದು ಉಳಿದವು ಅಸ್ಪಷ್ಟವಾಗಿರುತ್ತವೆ. ಈ ಸ್ಪಷ್ಟ ಗೆರೆಗಳು ಒಂದೊಂದು ವಿಷಯಕ್ಕೆ ಸಂಬಂಧಪಟ್ಟದ್ದಾಗಿವೆ. ಇದರಲ್ಲೊಂದು ರೇಖೆ ಜೀವರಕ್ಷಕ ಗೆರೆಯಾಗಿದೆ. ಈ ಗೆರೆ ಎಲ್ಲಾ ವ್ಯಕ್ತಿಗಳಲ್ಲಿ ಸ್ಪಷ್ಟವಾಗಿರುವುದಿಲ್ಲ. ಆದರೆ ಕೆಲವರಲ್ಲಿ ಇದು ಸ್ಪಷ್ಟವಾಗಿದ್ದು ಇದೇ ಕಾರಣಕ್ಕೆ ಇವರು ಪ್ರಮುಖರಾಗಿದ್ದಾರೆ. ಈ ರೇಖೆ ಇರುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ...

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!