By: Oneindia Kannada Video Team
Published : December 27, 2016, 11:59

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಮರುಜೀವ ಪಡೆದ ಪಾಕಿಸ್ತಾನದ ಬಾಲೆ

Subscribe to Oneindia Kannada

ಅನ್ಯದೇಶದ ಪುಟಾಣಿಗಳು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬರುವುದರಲ್ಲಿ ವಿಶೇಷವೇನೂ ಇಲ್ಲ. ಹಲವಾರು ಮಕ್ಕಳಿಗೆ ಇಲ್ಲಿನ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆತಿದೆ. ಮರುಜೀವ ಪಡೆದ ಸಾವಿರಾರು ರೋಗಿಗಳು ತಮ್ಮ ದೇಶಕ್ಕೆ ಮರಳಿದ್ದಾರೆ. ಆದರೆ, ಈ ಕಥೆ ವಿಶಿಷ್ಟದಲ್ಲಿ ವಿಶಿಷ್ಟವಾದುದು. ಬೋನ್ ಮ್ಯಾರೊ ರೋಗದಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಪುಟಾಣಿಗೆ ಸ್ಟೆಮ್ ಸೆಲ್ಸ್ ಗಳನ್ನು ನೀಡಿದ್ದು ಮತ್ತಾರೂ ಅಲ್ಲ, ಝೀನಿಯಾಳ ತಮ್ಮ, ಎಂಟು ತಿಂಗಳ ಪುಟ್ಟಪುಟಾಣಿ ಕಂದಮ್ಮ ರಯನ್. ಈ ಜಗತ್ತು ಏನೆಂದು ಅರಿಯದ ಎಂಟು ತಿಂಗಳ ಹಸುಳೆ ತನ್ನ ಅಕ್ಕನಿಗೆ ಜೀವದಾನ ಮಾಡಿದ್ದಾನೆ. ಇವರಿಬ್ಬರೂ ಪಾಕಿಸ್ತಾನದವರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!