By : Oneindia Kannada Video Team
Published : September 21, 2017, 06:59

ಬೆಂಗಳೂರಿನ ಗಿರಿನಗರದ ಆವಲಹಳ್ಳಿ ಜಂಕ್ಷನ್ ನಲ್ಲಿ ಒನ್ ಇಂಡಿಯಾ ಇಂಪ್ಯಾಕ್ಟ್

ಗಿರಿನಗರದ ಬಳಿಯಿರುವ ಆವಲಹಳ್ಳಿ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವ ಪೊಲೀಸ್ ಕಾನ್‌ಸ್ಟೇಬಲ್ ನನ್ನು ನೋಡಿ ದಿನನಿತ್ಯ ಅದೇ ರಸ್ತೆಯಲ್ಲಿ ಅಡ್ಡಾಡುವವರು ಅಕ್ಷರಶಃ ಸಂಭ್ರಮಿಸಿರುತ್ತಾರೆ, ನಿಟ್ಟುಸಿರುಬಿಟ್ಟಿರುತ್ತಾರೆ, ಮತ್ತೆ ಪೇದೆ ಮಾಯವಾಗದಿರಲಿ ಎಂದು ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಈ ಸಂಗತಿಯನ್ನು ಹೆಚ್ಚುವರಿ ಟ್ರಾಫಿಕ್ ಕಮಿಷನರ್ ಆಗಿರುವ ಹಿತೇಂದ್ರ ಅವರ ಗಮನಕ್ಕೆ ನಮ್ಮ ವೆಬ್ ಸೈಟ್ ಮೂಲಕ ತಂದಾಗ, ಅವರು ತಕ್ಷಣ ಸ್ಪಂದಿಸಿ ಪಶ್ಚಿಮ ವಿಭಾಗದ ಡಿಸಿಪಿ ಅವರ ಗಮನಕ್ಕೆ ತಂದಿದದಾರೆ. ಮರುದಿನದಿಂದಲೇ ಹೆಚ್ಚು ವಾಹನ ಸಂಚಾರ ಇರುವ ಸಮಯದಲ್ಲಿ ಈಗ ಪೊಲೀಸರು ಬಂದು ನಿಯಂತ್ರಿಸುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!