By: Oneindia Kannada Video Team
Published : September 21, 2017, 06:44

ಒನ್ಇಂಡಿಯಾ ಫಲಶ್ರುತಿ : ಆವಲಹಳ್ಳಿ ಜಂಕ್ಷನ್ ನಲ್ಲಿ ಪೊಲೀಸ್ ಪ್ರತ್ಯಕ್ಷ



ಗಿರಿನಗರದ ಬಳಿಯಿರುವ ಆವಲಹಳ್ಳಿ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವ ಪೊಲೀಸ್ ಕಾನ್‌ಸ್ಟೇಬಲ್ ನನ್ನು ನೋಡಿ ದಿನನಿತ್ಯ ಅದೇ ರಸ್ತೆಯಲ್ಲಿ ಅಡ್ಡಾಡುವವರು ಅಕ್ಷರಶಃ ಸಂಭ್ರಮಿಸಿರುತ್ತಾರೆ, ನಿಟ್ಟುಸಿರುಬಿಟ್ಟಿರುತ್ತಾರೆ, ಮತ್ತೆ ಪೇದೆ ಮಾಯವಾಗದಿರಲಿ ಎಂದು ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಈ ಮಾತುಗಳು ಉತ್ಪ್ರೇಕ್ಷೆಯಾಗಿ ಕಂಡರೂ ಸಾಕಷ್ಟು ಸತ್ಯ ಅಡಗಿದೆ. ಈ ಜಂಕ್ಷನ್ ಬೇರೆ ಜಂಕ್ಷನ್ ಗಳಿಗಿಂತ ಭಿನ್ನವಾಗಿಲ್ಲ. ಬೇರೆ ಚೌಕಗಳಲ್ಲಿ ಇರುವಂತೆ ಇಲ್ಲಿಯೂ ನಿತ್ಯವೂ ವಾಹನ ಜಂಗುಳಿ ಇದ್ದದ್ದೇ. ಆದರೆ, ಇಲ್ಲಿ ಇಲ್ಲದಿದ್ದುದು ಸಂಚಾರ ನಿಯಂತ್ರಿಸುವ ಪೊಲೀಸ್ ಪೇದೆ ಮಾತ್ರ!

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!