By: Oneindia Kannada Video Team
Published : November 08, 2017, 06:51

Note Ban 1st Anniversary :ಕಾಂಗ್ರೆಸ್ ನಾಯಕ ದಿನೇಶ್ ಗುಂಡು ರಾವ್ ಬಿಜೆಪಿ ವಿರುದ್ಧ ವಾಗ್ದಾಳಿ

Subscribe to Oneindia Kannada

ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ. ಜೇಬಿಗೊಂದು ರಾಜಗಾಂಭೀರ್ಯ ನೀಡಿದ್ದ ಐನೂರು, ಸಾವಿರದ ನೋಟುಗಳು ಮೌಲ್ಯವೇ ಇಲ್ಲದ, ಪೇಪರ್ ಪೀಸುಗಳು ಎನ್ನಿಸಿದ ದಿನ ಇದು! ಅಪನಗದೀಕರಣ ಎಂಬ ಅನಿರೀಕ್ಷಿತ ಆಘಾತಕ್ಕೆ ಇದೀಗ ಮೊದಲ ವಾರ್ಷಿಕೋತ್ಸವ(ನ.08). ಕಪ್ಪುಹಣ ನಿಗ್ರಹ, ಭ್ರಷ್ಟಾಚಾರ ತಡೆ, ಭಯೋತ್ಪಾದನೆ ನಿರ್ಮೂಲನೆ ಮುಂತಾದ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಕೇಂದ್ರ ಎನ್ ಡಿಎ ಸರ್ಕಾರ ಘೋಷಿಸಿದ ಅಪನಗದೀಕರಣದ ಪರಿಣಾಮವನ್ನು ನಿಕಷಕ್ಕೆ ಹಚ್ಚಿ ನೋಡುವ ಸಂದರ್ಭ ಇದು. ಆದರೆ ಬ್ಯಾಂಕುಗಳ ಮುಂದೆ ಹನುಮಂತನ ಬಾಲದ ಹಾಗೆ ಸೃಷ್ಟಿಯಾಗಿದ್ದ ಕ್ಯೂಗಳು, ಹಣವಿಲ್ಲದೆ ಸದಾ 'ಮುಚ್ಚಿದ ಬಾಗಿಲು' ಆಗಿರುತ್ತಿದ್ದ ಎಟಿಎಂಗಳು, ನಂತರ ಎರಡು ಸಾವಿರದ ನೋಟು ಬಿಡುಗಡೆಯಾದರೂ, ಚಿಲ್ಲರೆಗಾಗಿ ಯಾರ್ಯಾರದೋ ಮುಂದೆ ಕೈಬಿಚ್ಚಿನಿಂತ ಕ್ಷಣ... ಎಲ್ಲವೂ ಅಪನಗದೀಕರಣದ ಕುರಿತು ಶ್ರೀಸಾಮಾನ್ಯನಲ್ಲಿ ರೇಜಿಗೆ ಹುಟ್ಟಿಸಿದ್ದರೆ ಅಚ್ಚರಿಯೇನಿಲ್ಲ. ಇನ್ನು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ಕೂಡ ನಡೆಸಿದ್ದು ಕಾಂಗ್ರೆಸ್ ನಾಯಕ ದಿನೇಶ್ ಗುಂಡು ರಾವ್ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!