By : Oneindia Kannada Video Team
Published : November 10, 2017, 11:15

ವಾಯು ಮಾಲಿನ್ಯದಿಂದ ತತ್ತರಿಸಿದ ನವ ದೆಹಲಿ ನಾಸಾ ಚಿತ್ರದಲ್ಲಿ ರಹಸ್ಯ ಬಯಲು

'ನಾಸಾ' ಚಿತ್ರಗಳಲ್ಲಿ ದೆಹಲಿ ಮಾಲಿನ್ಯದ ರಹಸ್ಯ ಬಯಲು. ಹಿಂದೆಂದೂ ಕಂಡು ಕೇಳರಿಯದ ವಾಯು ಮಾಲಿನ್ಯಕ್ಕೆ ದೆಹಲಿ ತತ್ತರಿಸಿದೆ. ಶಾಲೆಗಳಿಗೆ ಭಾನುವಾರವರೆಗೆ ರಜೆ ಘೋಷಿಸಲಾಗಿದೆ. ಜತೆಗೆ ನವೆಂಬರ್ 13ರಿಂದ ಸಮ-ಬೆಸ ನಿಯಮ ಜಾರಿಗೆ ತರಲಾಗಿದೆ. ದೆಹಲಿಯಲ್ಲಿ ಇಷ್ಟೊಂದು ಮಾಲಿನ್ಯ ಉಂಟಾಗಲು ನೆರೆಯ ರಾಜ್ಯಗಳಲ್ಲಿ ಬೆಳೆಗಳ ತ್ಯಾಜ್ಯಕ್ಕೆ ಇಡುತ್ತಿರುವ ಬೆಂಕಿ ಪ್ರಮುಖ ಕಾರಣವಾಗಿದೆ.ಹೀಗಾಗಿ ಬೆಳೆಗಳಿಗೆ ಬೆಂಕಿ ಹಚ್ಚುವುದಕ್ಕೆ ಅಂತ್ಯ ಹಾಡುವಂತೆ ಪಂಜಾಬ್ ಮತ್ತು ಹರ್ಯಾಣ ಮುಖ್ಯಮಂತ್ರಿಗಳಿಗೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಬೆಳೆಗಳನ್ನು ರೈತರು ಉರಿಸದೇ ಇದ್ದು ನಾಶ ಮಾಡುವ ಪರ್ಯಾಯ ವಿಧಾನ ಕಂಡುಕೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಕೇಜ್ರಿವಾಲ್ ಹೇಳಿಕೆಗೆ ಗರಂ ಆಗಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, "ಅವರಿಗೆ ನೈಜ ಸಮಸ್ಯೆ ಅರ್ಥವಾಗಿತ್ತಿಲ್ಲ. 2 ಕೋಟಿ ಭತ್ತದ ಹುಲ್ಲು ಇದೆ. ಇದನ್ನು ಎಲ್ಲಿ ಸಂಗ್ರಹಿಸಿ ಎಂದು ರೈತರಿಗೆ ನಾನು ಕೇಳಿಕೊಳ್ಳಲಿ?" ಎಂದು ಪ್ರಶ್ನಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!