By: Oneindia Kannada Video Team
Published : November 06, 2017, 01:53

ಇನ್ಮುಂದೆ ರೈಲುಗಳಲ್ಲಿ ಗೋಲ್ಡ್ ಕ್ಲಾಸ್ ಪ್ರಯಾಣ ಕೂಡ ಸಾಧ್ಯ

Subscribe to Oneindia Kannada

ಇನ್ನು ಮುಂದೆ ರೈಲಿನಲ್ಲೂ ಗೋಲ್ಡ್ ಕ್ಲಾಸ್ ಪ್ರಯಾಣ ಸಾಧ್ಯ. : ರೈಲ್ವೆ ಇಲಾಖೆಯ ಮೊತ್ತ ಮೊದಲ ಗೋಲ್ಡ್ ಕ್ಲಾಸ್ ವಿಭಾಗವನ್ನು ನವೆಂಬರ್ 6ರ ಸೋಮವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಮುಂಚೆ ಎ.ಸಿ 3 ಟೈರ್ ರೈಲ್ವೆಯ ಉನ್ನತ ಪ್ರಯಾಣ ಸೇವೆಯಾಗಿತ್ತು. ದೆಹಲಿ- ಕತ್ಗೋದಾಮ್ ನಡುವಿನ ಶತಾಬ್ಧಿ ಎಕ್ಸ್ಪ್ರೆಸ್ ರೈಲು ಗೋಲ್ಡ್ ಕ್ಲಾಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಮೊದಲ ಭಾರತೀಯ ರೈಲು ಎಂಬ ಹಿರಿಮೆ ಪಡೆದುಕೊಂಡಿದೆ.ಗೋಲ್ಡ್ ಕ್ಲಾಸ್ ಪ್ರಯಾಣಿಕರಿಗೆ ಮನರಂಜನೆ, ಸುಗ್ರಾಸ ಭೊಜನ, ಅತ್ಯಾಧುನಿಕ ಒಳಾಂಗಣ ವಿನ್ಯಾಸ, ಸುಖಾಸನ ವ್ಯವಸ್ಥೆ, ಎ.ಸಿ, ಸ್ವಯಂಚಾಲಿತ ಡೋರ್ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯಗಳಿಗೂ ಆಧುನಿಕತೆಯ ಸ್ಪರ್ಷ ನೀಡಿದ್ದು, ಸ್ವಯಂ ಚಾಲಿತ ಫ್ಲಷ್ ವ್ಯವಸ್ಥೆ, ದುರ್ಗಂದ ನಿವಾರಕ, ನೈರ್ಮಲ್ಯ ಕಾಪಾಡಲು ವಿಶೇಷ ಆಟೋಮ್ಯಾಟಿಕ್ ವ್ಯವಸ್ಥೆ ಬಳಸಲಾಗಿದೆ.ಗೋಲ್ಡ್ ಕ್ಲಾಸ್ ನಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಸಿ.ಆರ್.ಎಫ್ ಜವಾನರನ್ನೂ ನೇಮಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!